ಮಂಗಳೂರು, ಫೆ.22(DaijiworldNews/TA): ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಮಂಗಳೂರು ನಗರ ಇದರ ವಾರ್ಷಿಕೋತ್ಸವ ಸಮಾರಂಭ ಮಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ನೆರವೇರಿತು.







ಕಾರ್ಯಕ್ರಮಕ್ಕೆ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷ ವಿಜಯಲಕ್ಷ್ಮೀ ಬಿ ಶೆಟ್ಟಿ ಇತರ ಗಣ್ಯರು ಸೇರಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.ಈ ವೇಳೆ ಹಿರಿಯ ಮತ್ತು ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಸನ್ಮಾನ ಮತ್ತು ಅಶಕ್ತ ಕಾರ್ಯಕರ್ತೆ ಸಹಾಯಕಿಯರಿಗೆ ಸಂಘದ ವತಿಯಿಂದ ಸಹಾಯ ಧನ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಸುಮಂತ್ ರಾವ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರ್, ಚಿರುಂಭಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕಿ ಸುಜಾತಾ ಚಂದ್ರಶೇಖರ, ಮಂಗಳೂರಿನ ಉದ್ಯಮಿ ರಾಜೇಶ್ ಶೆಟ್ಟಿ ಗೊಲ್ಲರಬೆಟ್ಟು, ಹವ್ಯಾಸಿ ರಂಗ ಕಲಾವಿದೆ ಶೋಭಾ ದೇವಾಡಿಗ, ಮನಪ ಸದಸ್ಯರು ಕೇಶವ ಮರೋಳಿ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಪಾಂಡೇಶ್ವರ ವಲಯ ಹಿರಿಯ ಮೇಲ್ವಿಚಾರಕಿ ಪೂರ್ಣಿಮಾ, ಕದ್ರಿ ವಲಯ ಮೇಲ್ವಿಚಾರಕಿ ಅನುಪಮ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಸಂಘದ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಬಿ. ಆರ್, ಜಿಲ್ಲಾ ಸಂಘದ ಕೋಶಾಧಿಕಾರಿ ರೇಣುಖಾ ಬಂಟ್ವಾಳ, ಬಂಟ್ವಾಳ ತಾಲೂಕಿ ಸಂಘದ ಅಧ್ಯಕ್ಷೆ ವಾಣಿ, ಮಂಗಳೂರು ಗ್ರಾಮಾಂತರ ಸಂಘದ ಅಧ್ಯಕ್ಷೆ ಶಕೀಲಾ, ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಸಂಘದ ಅಧ್ಯಕ್ಷೆ ಆಶಾಲತ ಎಂ.ವಿ, ಕಾರ್ಯದರ್ಶಿ ಸುಜಾತ ರೈ, ಕೋಶಾಧಿಕಾರಿ ಸುಜಾತ ಶೆಟ್ಟಿ, ರಾಜ್ಯ ಸಂಘದ ಕೋಶಾಧಿಕಾರಿ ವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.