ಬಂಟ್ವಾಳ, ಫೆ.23 (DaijiworldNews/AA): ನಾವೂರು ಗ್ರಾಮದ ಕೂಡಿಬೈಲಿನಲ್ಲಿ 14ನೇ 'ಮೂಡೂರು-ಪಡೂರು' ಜೋಡುಕರೆ ಬಯಲು ಕಂಬಳ ಮಾರ್ಚ್ 8ರಂದು ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಭಾಗವಹಿಸುವರು ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.



ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಶನಿವಾರ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ದಿ.ಆಲ್ಬರ್ಟ್ ಪಾಯಸ್ ಕೂಡಿಬೈಲು ವೇದಿಕೆಯಲ್ಲಿ ಅಂದು ಬೆಳಿಗ್ಗೆ 8.45ಕ್ಕೆ ಸೋಲೂರು ಆರ್ಯ-ಈಡಿಗ ಮಹಾ ಸಂಸ್ಥಾನ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಸಹಿತ ಅಲ್ಲಿಪಾದೆ ಸೇಂಟ್ ಆಂಟನಿ ಚರ್ಚ್ ಧರ್ಮಗುರು ರಾಬರ್ಟ್ ಡಿಸೋಜ, ಅಳದಂಗಡಿ ಅರಮನೆ -ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಕಂಬಳ ಉದ್ಘಾಟಿಸುವರು ಎಂದರು.
ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್ ರವರು ಮಾತನಾಡಿ, ಅತ್ಯುತ್ತಮ ರೀತಿಯಲ್ಲಿ ಕಂಬಳ ನಡೆಸುವ ಇರಾದೆಯಲ್ಲಿ ಸಿದ್ಧತೆಗಳು ನಡೆಯುತ್ತಿದೆ ಎಂದರು.
ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಕೋಶಾಧಿಕಾರಿ ಫಿಲಿಪ್ ಫ್ರಾಂಕ್, ಪ್ರಮುಖರಾದ ಸುದರ್ಶನ್ ಜೈನ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಕೆ.ಪದ್ಮನಾಭ ರೈ, ಪಿ.ರಾಮಕೃಷ್ಣ ಆಳ್ವ, ಸುಧಾಕರ ಶೆಣೈ ಖಂಡಿಗ, ಸುದೀಪ್ ಕುಮಾರ್ ಶೆಟ್ಟಿ, ಉಮೇಶ ಕುಲಾಲ್ ನಾವೂರು, ಸದಾಶಿವ ಬಂಗೇರ, ಸುರೇಶ್ ಕುಮಾರ್ ನಾವೂರು, ಶಬೀರ್ ಸಿದ್ಧಕಟ್ಟೆ, ಅಬ್ಬಾಸ್ ಅಲಿ, ಬಿ.ಮೋಹನ್, ಮಹಮ್ಮದ್ ಶರೀಫ್, ಮಹಮ್ಮದ್ ನಂದಾವರ, ರಾಜೇಶ್ ರಾಡ್ರಿಗಸ್, ಸಿದ್ದಿಕ್ ಗುಡ್ಡೆಯಂಗಡಿ, ದೇವಪ್ಪ ಕುಲಾಲ್ ಪಂಜಿಕಲ್ಲು, ಕೇಶವ ಪೂಜಾರಿ, ರಾಜೇಶ್ ರೋಡ್ರಿಗಸ್, ಪ್ರವೀಣ್ ವೆಂಕಪ್ಪ ಪೂಜಾರಿ, ಡೆಂಜಿಲ್ ನೊರೊನ್ಹಾ ಭಾಗವಹಿಸಿದ್ದರು.
ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು ವಂದಿಸಿದರು.