ಮಂಗಳೂರು, ಫೆ.24 (DaijiworldNews/AK): ಹಲವಾರು ವರ್ಷಗಳಿಂದ ನಮ್ಮ ಗ್ರಾಮವು ಸಾರ್ವಜನಿಕರಿಗೆ ದಿನನಿತ್ಯ ನೀರು ಪೂರೈಕೆಯಾಗುತ್ತಿಲ್ಲ. ಒದಗಿದರೂ ಕಡಿಮೆ ಒತ್ತಡದಿಂದಾಗಿ ಎತ್ತರದ ಪ್ರದೇಶದಲ್ಲಿರುವ ಹಲವು ಮನೆಗಳಿಗೆ ನೀರು ತಲುಪುವುದಿಲ್ಲ. ನಮಗೆ 24 ಗಂಟೆ ಕಾಲ ಬರುವ ಪೈಪ್ ಲೈನ್ ಮೂಲಕ ನೀರನ್ನು ಒದಗಿಸುವಂತೆ ರೆಂಗೇಲ್ ನಾಗರಿಕರು ಪುರಸಭಾ ಅಧ್ಯಕ್ಷರು ಮತ್ತು ಪುರಸಭಾ ಮುಖ್ಯ ಅಧಿಕಾರಿಯವರಿಗೆ ಮನವಿ ಮಾಡಿದ್ದಾರೆ.


ಇತ್ತ ಕೌಡೇಲ್ ನಾಗರಿಕರು ಕೂಡ ಗ್ರಾಮವು ಸಾರ್ವಜನಿಕರಿಗೆ ನೀರು, ವಿದ್ಯುತ್ ದೀಪಗಳಂತಹ ಮೂಲಭೂತ ಸೌಕರ್ಯಗಳು ದೂರೆಯುತ್ತಿಲ್ಲ.ದಿನನಿತ್ಯ ನೀರು ಪೂರೈಕೆಯಾಗುತ್ತಿಲ್ಲ.ಒದಗಿದರೂ ಕಡಿಮೆ ಒತ್ತಡದಿಂದಾಗಿ ಎತ್ತರದ ಗುಡ್ಡದ ಪ್ರದೇಶದಲ್ಲಿರುವ ಹಲವು ಮನೆಗಳಿಗೆ ನೀರು ತಲುಪುವುದಿಲ್ಲ.ಕಡಿಮೆ ಒತ್ತಡದ ನೀರು ಪೂರೈಕೆಗೆ ಮೂಲ ಕಾರಣ ನೀರು ನಿರ್ವಾಹಕರು ಅವರು ಗೇಟ್ ವಾಳ್ವೆಗಳನ್ನು ಸಂಪೂರ್ಣವಾಗಿ ತೆರೆಯುತ್ತಿಲ್ಲ.ನೀರಿನ ನಿರ್ವಾಹಕರು ವಿನಾಕಾರಣ ಕೌಡೇಲ್ ಗ್ರಾಮದ ಕಡೆಗೆ ತಾರತಮ್ಯ ಮಾಡುತ್ತಿದ್ದಾರ ಎಂದು ದೂರಿದ್ದಾರೆ.
ಆಪರೇಟರ್ ಅನ್ನು ಬದಲಾಯಿಸಲು ಅಥವಾ ನಮಗೆ ಕೌಡೇಲ್ ಗ್ರಾಮಕ್ಕೆ ಪ್ರತ್ಯೇಕ ನೀರು ಸರಬರಾಜು ಟ್ಯಾಂಕ್ ಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.
ರಾತ್ರಿ ವೇಳೆ ಹಲವು ಮದರಸಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೀದಿ ದೀಪವಿಲ್ಲದೆ ತೆರಳುತ್ತಿದ್ದಾರೆ. ಎಷ್ಟೋ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಡೆಯುವಾಗ ಹಾವುಗಳು ಎದುರಾಗುತ್ತವೆ.ಇದು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಭಯ ಮತ್ತು ಆತಂಕದ ಪರಿಸ್ಥಿತಿಯಾಗಿದೆ.
ಈ ನಿಟ್ಟಿನಲ್ಲಿ ಹಲವು ಬಾರಿ ಸಂಬಂಧಪಟ್ಟ ಕೌನ್ಸಿಲರ್ ಹಾಗೂ ಸ್ಥಳೀಯ ಪುರಸಭಾ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರೂ ಬರೇ ಭರವಸೆಯನ್ನು ಮಾತ್ರ ನೀಡಿ ಕಳುಹಿಸುತ್ತಿದ್ದರು.ಆದ್ದರಿಂದ ತಾವು ಇಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ನೀರು ಮತ್ತು ದಾರಿದೀಪ ಪೂರೈಕೆ ಮಾಡಲು ಆಗ್ರಹಿಸಿದರು. ಇದರ ಬಗ್ಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕಾಗಿ ಪುರಸಭಾ ಅಧ್ಯಕ್ಷರು ಮತ್ತು ಪುರಸಭಾ ಮುಖ್ಯ ಅಧಿಕಾರಿಯವರಿಗೆ ಮನವಿ ನೀಡಲಾಯಿತು.