ಉಡುಪಿ, ಫೆ.25 (DaijiworldNews/AK): ಉಡುಪಿಯಲ್ಲಿ ಸತತ ಎರಡನೇ ದಿನವೂ ಸರಕಾರಿ ನೌಕರರ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳರ ಹಾವಳಿ ಮುಂದುವರೆದಿದೆ. ಕುಂಜಿಬೆಟ್ಟು ಸಿಬ್ಬಂದಿ ವಸತಿ ನಿಲಯದಲ್ಲಿರುವ ಮೂರು ಮೆಸ್ಕಾಂ ಅಧಿಕಾರಿಗಳ ನಿವಾಸಕ್ಕೆ ಕಳ್ಳರು ನುಗ್ಗಿದ್ದಾರೆ.




ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಅಲ್ಲದೇ ಬೀಗ ಹಾಕಿದ ಮನೆಗಳಿಗೆ ನುಗ್ಗಿದ್ದಾರೆ. ಹರೇರಾಮ ವಸತಿ ಸಮುಚ್ಚಯದಲ್ಲಿ ಒಂದು ಕಳ್ಳತನ ನಡೆದಿದ್ದು, ಮತ್ತೊಬ್ಬ ಮೆಸ್ಕಾಂ ನೌಕರನ ಮನೆಯಲ್ಲೂ ಕಳ್ಳತನವಾಗಿದೆ.
ಅಲ್ಲದೇ ಕೊಂಕಣ ರೈಲ್ವೆಯ ಕಿರಿಯ ಇಂಜಿನಿಯರ್ ಮನೆಯಲ್ಲೂ ಕಳವು ಆಗಿದೆ. ಮೂರು ವಾಚ್, ಬೆಳ್ಳಿ ನಾಣ್ಯ ಸೇರಿದಂತೆ ಕದ್ದ ಮಾಲು 15 ಸಾವಿರ ರೂ. ಅಂದಾಜಿಸಲಾಗಿದೆ. ತನಿಖೆಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕಳುಹಿಸಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.