ಕಾರ್ಕಳ: ಜೂ 13 (Daijiworld News/SM): ಕಾರ್ಕಳ, ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಯನ್ನು ಪತ್ತೆ ಹಚ್ಚಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಅಜೆಕಾರು ಸಮೀಪದ ಎಣ್ಣೆಹೊಳೆಯಲ್ಲಿ ನಡೆದಿದೆ.
ಎಣ್ಣೆಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯನ್ನು ಬಯಲಿಗೆಳೆದ ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ನೇತೃತ್ವದ ಪೊಲೀಸರ ತಂಡವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಮುನ್ನವರ್ (40), ಗಣೇಶ್ ಭಂಡಾರಿ(41), ಸುರೇಶ್ ಪೂಜಾರಿ(32), ಚಿರಂಜೀವಿ(34) ಎಂಬವರು ಪ್ರಕರಣದ ಆರೋಪಿಗಳಾಗಿದ್ದಾರೆ.
ಇನ್ನು ಆರೋಪಿಗಳು ದಂಧೆಗೆ ಬಳಸಿದ ಟಿಪ್ಪರ್ ಲಾರಿ, ಈಚರ್, ಟೆಂಪೋ ಹಾಗೂ ಶಿಫ್ಟ್ ಕಾರನ್ನು ಪೊಲೀಸರು ವಶಪಡಿಸಿದ್ದಾರೆ. ಬುಧವಾರ ತಂಡರಾತ್ರಿಯಿಂದ ಗುರುವಾರದ ನಸುಕಿನ ಜಾವದಲ್ಲಿ ಈ ಕಾರ್ಯಚರಣೆ ನಡೆದಿದೆ.
ಆರೋಪಿಗಳು ಹಲವು ವರ್ಷಗಳಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ದೊರೆತ ಖಚಿತ ಮಾಹಿತಿಯಂತೆ ಎಎಸ್ಪಿ ಕೃಷ್ಣಕಾಂತ ಅವರು ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ.