ಉಡುಪಿ, ಫೆ.27(DaijiworldNews/TA): ಕಡಲ ತೀರದ ಪ್ರವಾಸಿಗರಿಗೆ ಶಿವ ದರ್ಶನ ಮಾಡಿಸಲಾಯಿತು. ಕುಂದಾಪುರ ತಾಲೂಕಿನ ಕೋಟೇಶ್ವರದ ಕೋಡಿ ಬೀಚ್ ನಲ್ಲಿ ಶಿವರಾತ್ರಿ ವಿಶೇಷ ಹಿನ್ನೆಲೆಯಲ್ಲಿ ವಿಶೇಷ ಮರಳ ಕಲಾಕೃತಿ ಎಲ್ಲರನ್ನು ಸೆಳೆಯಿತು.


ಬಿಲ್ವಪತ್ರೆ ರುದ್ರಾಕ್ಷಿಯ ಮಾಲೆ ಸಹಿತವಾಗಿ ನಂದಿ ಹಾಗೂ ಹಾವನ್ನು ಒಳಗೊಂಡ ಶಿವಲಿಂಗವನ್ನು ಮರಳಿನಲ್ಲಿ ರಚಿಸಲಾಯಿತು. 12 ಅಡಿ ಅಗಲ ನಾಲ್ಕು ಅಡಿ ಎತ್ತರದ ಮರಳುಶಿಲ್ಪದ ಕಲಾ ಕೃತಿಯನ್ನು 23 ಕಲಾಸಕ್ತ ವಿದ್ಯಾರ್ಥಿಗಳು ರಚನೆ ಮಾಡಿದರು. ಗುಡಿಯಲ್ಲಿ ಶಿವಲಿಂಗ ದರ್ಶನ ಎಂಬ ಕಾನ್ಸೆಪ್ಟ್ ನಲ್ಲಿ ಈ ಮರಳು ಶಿಲ್ಪವನ್ನು ರಚನೆ ಮಾಡಲಾಗಿದೆ.