ಮಂಗಳೂರು, ಡಿ 4: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯದಾಟವು ಗರಿಕೆದರಿ ನಿಂತಿದೆ. ಕರ್ನಾಟಕದಲ್ಲಿ ಬಲಿಷ್ಟ ಪಕ್ಷಗಳೆಂದು ಬಿಂಬಿತವಾಗಿರುವ ಕಾಂಗ್ರೆಸ್, ಬಿಜೆಪಿ,ಹಾಗೂ ಜೆಡಿಎಸ್ ತನ್ನದೇ ರೀತಿಯಲ್ಲಿ ಆಟ ಪ್ರಾರಂಭಿಸಿದೆ. ಇದೆಲ್ಲದರ ನಡುವೆ ಬಿಜೆಪಿ ರಾಜಕೀಯವಾಗಿ ರಾಜ್ಯದಲ್ಲಿ ಸಮರ್ಥವಾಗಿ ಹಿಡಿತ ಸಾಧಿಸಲು ಹೆಣಗಾಡುತ್ತಿದೆ. ಆಡಳಿತ ಪಕ್ಷ ಕಾಂಗ್ರೇಸ್ ಸರಕಾರವನ್ನು ಇಕ್ಕಟಿಗೆ ಸಿಲುಕಿಸಲು ಬಿಜೆಪಿ ಪ್ರಯತ್ನಿಸಿದ ನಡೆಯೆಲ್ಲಾ ವಿಫಲವಾಗುತ್ತಿದೆ. ಬಿಜೆಪಿ ಪಕ್ಷ ಮತ್ತೊಮ್ಮೆ ಕರುನಾಡಿನಲ್ಲಿ ಸರ್ಕಾರವನ್ನು ಸ್ಥಾಪಿಸಬೇಕೆಂಬ ಮಹಾದಾಸೆಗೆ ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಅವರ ಶೀತಲ ಸಮರ ಪಕ್ಷಕ್ಕೆ ಮುಳ್ಳಾಗಿ ಪರಿಣಮಿಸಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ಬಿಜೆಪಿಯ ಯುವ ಸಂಸದ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆಯೊಂದು ರಾಜಕೀಯ ವಿಶ್ಲೇಷಕರನ್ನು ಕಾಡ ತೊಡಗಿದೆ. ಮುಂಬರುವ ಚುನಾವಣೆಯಲ್ಲಿ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಗಾದೆ ಮಾತಿನಂತೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟಿದ್ದಾರೆಯೇ ಎನ್ನುವ ಪ್ರಶ್ನೆಯೊಂದು ಉದ್ಬವವಾಗುತ್ತದೆ. ಪಕ್ಷದಲ್ಲಿ ಹಿರಿಯ ನಾಯಕರ ಕಳಪೆ ಕಾರ್ಯತಂತ್ರವನ್ನು ಗಮನಿಸಿಯೇ ಪ್ರತಾಪ್ ಸಿಂಹ ಈ ಹೆಜ್ಜೆಯನ್ನಿಟ್ಟಿದ್ದಾರೆ ಎನ್ನುವ ಮಾತನ್ನು ಸುಖಾ ಸುಮ್ಮನೆ ತಳ್ಳಿ ಹಾಕಲು ಸಾಧ್ಯವಿಲ್ಲ. ಇದಕ್ಕೆಲ್ಲದಕ್ಕೆ ಪುಷ್ಟಿ ನೀಡುವಂತೆ pratap simha for CM ಫೇಸ್ ಬುಕ್ ಖಾತೆಯೊಂದು ಚಾಲ್ತಿಯಲ್ಲಿದೆ. ಇದರಲ್ಲಿ ಸುಮಾರು 78,000 ಕ್ಕೂ ಹೆಚ್ಚು ಮಂದಿ ಅನುಯಾಯಿಗಳಿದ್ದಾರೆ. ಈ ನಡುವೆ ಪಕ್ಷದ ಹಿರಿಯತಲೆಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಅನಂತ್ ಕುಮಾರ್ ಮತ್ತಿತರನ್ನು ನಾಯಕತ್ವವನ್ನು ಸ್ವೀಕರಿಸಲು ಪಕ್ಷದ ಯುವ ಕಾರ್ಯಕರ್ತರು ಸಿದ್ದರಿಲ್ಲ ಎನ್ನುವುದನ್ನು ಪಕ್ಷದಲ್ಲಿ ತೆರೆದ ರಹಸ್ಯವಾಗಿದೆ. ಇದೆಲ್ಲದರ ನಡೆಯೇ ಹುಣಸೂರಿನ ಹನುಮ ಜಯಂತಿಯ ದಿನ ನಡೆದ ಘಟನೆ ಎಂದೇ ಬಿಂಬಿಸಲಾಗುತ್ತಿದೆ. ಇನ್ನು I support pratap simha, paratha simha for CM, ಎಂಬ ಖಾತೆಯಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದು ಇವರೆಲ್ಲ ಖಾತೆಯನ್ನು ಹ್ಯಾಂಡಲ್ ಮಾಡ್ತಾ ಇರೋರ್ಯಾರು ಅನ್ನುವ ಅನುಮಾನಗಳು ಕಾಡತೊಡಗುತ್ತಿದೆ.