ಬಂಟ್ವಾಳ, ಫೆ.28 (DaijiworldNews/AA): ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ನಾವು ಆದ್ಯತೆ ನೀಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬದುಕು ಭಯಾನಕವಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಭೂಸಂಪನ್ಮೂಲ ಇಲಾಖೆಯ ತಜ್ಞರಾದ ಡಾ.ಎನ್ ಕೆ.ರಾಜೇಶ್ ಕುಮಾರ್ ಹೇಳಿದ್ದಾರೆ.










ಕೇಂದ್ರ ಸರ್ಕಾರದ ಡಿಪಾರ್ಟ್ಮೆಂಟ್ ಆಫ್ ಲ್ಯಾಂಡ್ ರಿಸೋರ್ಸಸ್ ಗ್ರಾಮೀಣ ಮಂತ್ರಾಲಯ ಕೃಷಿ ಇಲಾಖೆಯ ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಹಮ್ಮಿಕೊಂಡ ಜಲಾನಯನ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನೀರಿನ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದ ಅವರು, ಮಣ್ಣಿನ ಸವಕಳಿಯನ್ನು ತಪ್ಪಿಸಲು ಬದುಗಳನ್ನು ನಿರ್ಮಿಸಬೇಕೆಂದರು. ಜಲಾನಯನ ಯಾತ್ರೆಯು ಮಣ್ಣು ಮತ್ತು ನೀರಿನ ಸಂರಕ್ಷಣೆ, ನೀರು ಕೊಯ್ಲು ಮತ್ತು ಮರುಪೂರಣ ಚಟುವಟಿಕೆಗಳಂತಹ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದರು.
7750 ಜನಸಂಖ್ಯೆ ಮತ್ತು ಶೇ.98 ರಷ್ಟು ಸಾಕ್ಷರತೆಯನ್ನು ಹೊಂದಿರುವ ಸಜಿಪಮೂಡ ಎಂಬ ಸಣ್ಣ ಗ್ರಾಮಕ್ಕೆ ಈ ಉಪಕ್ರಮವು ವಿಶೇಷ ಮಹತ್ವದ್ದಾಗಿದೆ. ಜಲಾನಯನ ಯಶಸ್ವಿಗೆ ಸಮುದಾಯ, ಸ್ಥಳೀಯ ಅಧಿಕಾರಿಗಳು ಮತ್ತು ನೀರಿನ ಸಂರಕ್ಷಣೆಯಲ್ಲಿ ತಜ್ಞರ ಸಾಮೂಹಿಕ ಪ್ರಯತ್ನಗಳು ಕಾರಣ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರಿನ ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು. ಸಜಿಪಮೂಡ ಗ್ರಾ,ಪಂ, ಅಧ್ಯಕ್ಷೆ ಶ್ರೀಮತಿ ಶೋಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಜೋ ಪ್ರದೀಪ್ ಡಿಸೋಜ, ದ.ಕ ಜಿಲ್ಲೆ ಜಂಟಿ ಕೃಷಿ ನಿರ್ದೇಶಕರಾದ ಹೊನ್ನಪ್ಪ ಗೋವಿಂದೇ ಗೌಡ, ಮಂಗಳೂರು ಉಪವಿಭಾಗದ ಉಪಕೃಷಿ ನಿರ್ದೇಶಕರಾದ ಕುಮುದ, ಸಹಾಯಕ ಕೃಷಿನಿರ್ದೇಶಕರಾದ ವೀಣಾ ಕೆ ಆರ್, ಕೃಷಿ ಅಧಿಕಾರಿಯಾದ ನಂದನ್ ಶೆಣೈ ಪಿ, ಸಜಿಪಮೂನ್ನೂರು ಗ್ರಾ.ಪಂ. ಅಧ್ಯಕ್ಷೆ ಅನಿತಾ, ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಪದ್ಮರಾಜ ಬಲ್ಳಾಳ್, ಮಾವಂತೂರು, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪದ್ಮನಾಭ ರೈ ಗೋಳ್ತಮಜಲು, ಸಜಿಪಮೂಡ ಗ್ರಾ,ಪಂ. ಉಪಾಧ್ಯಕ್ಷರಾದ ಫೌಝೀಯ, ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ, ಯೋಗೀಶ್ ಬೆಳ್ಚಡ, ಹಮೀದ್, ಸಿದ್ಧೀಕ್, ಅಬ್ದುಲ್ ಕರೀಂ, ಸೋಮನಾಥ, ಸೀತಾರಾಮ, ವಿಜಯ, ಅರುಂದತಿ, ಮಹಾದೇವಿ, ಪ್ರಮೀಳಾ ಸದಸ್ಯರು ಸ.ಮೂಡ ಗ್ರಾ.ಪಂ., ಪಂಚಾಯತ್ ಕಾರ್ಯದರ್ಶಿ ಸುಜಾತ, ಪಂಚಾಯತ್ ಸಿಬ್ಬಂದಿಗಳಾದ ರವಿರಾಜ್, ಭವಾನಿ, ರೇಷ್ಮಾ, ಲಾವಣ್ಯ, ಎಂಬಿಕೆ ಅಕ್ಷತಾ, ಯಲ್ ಸಿ ಆರ್ ಪಿ ಹರಿಣಾಕ್ಷಿ ಕೃಷಿ ಇಲಾಖೆ ಬಂಟ್ವಾಳ ಮೀನಾಕ್ಷಿ ಆತ್ಮಯೋಜನೆಯ ಬಿಟಿಯಂ ದೀಕ್ಷಾ, ಆತ್ಮಯೋಜನೆಯ ಎಟಿಯಂ ಹಣಮಂತ ಕಾಳಗಿ, ವಿರೂಪಾಕ್ಷಿ ಹಡಪದ, ತ್ರಿನೇತ್ರಾ, ದಿವ್ಯ, ಯಶೋದಾ, ಸಂದೀಪ್ ಜಲಾನಯನ ಸಹಾಯಕರಾದ ಪ್ರವೀಣ್ ಈಶ್ವರನಾಯ್ಕ್, ವೀಣಾ ಡಿಸೋಜ ವಿನೀತ್, ರ್ಷಿತ್, ಉದಯ್, ಸಾತ್ವಿಕ್, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಶಿಶು ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಯನ್ ಆರ್ ಯಲ್ ಯಮ್ ಯೋಜನೆಯ ಕೃಷಿ ಸಖಿಯರು, ಸುಭಾಷ್ ನಗರದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಜಲಾನಯನ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಅನುಷ್ಠಾನಗೊಳಿಸಲು ಸಹಕರಿಸಿದ ಪ್ರಭಾಕರ ಶೆಟ್ಟಿ, ಕೊಳಕೆ, ಪದ್ಮನಾಭ ಕುಂದರ್ ಕಂದೂರು, ಗ್ರಾ.ಪಂ. ಅಧ್ಯಕ್ಷೆ ಶೋಭಾ ಶೆಟ್ಟಿ,ಉಪಾಧ್ಯಕ್ಷೆ ಫೌಝೀಯ, ಪಂಚಾಯತಿ ಸಿಬ್ಬಂದಿ ಲಕ್ಷ್ಮೀಶ, ಕೃಷಿಸಖಿ ಶ್ರೀಮತಿ ವಿನೋದ, ಕೃಷಿಕರಾದ ಶ್ರೀಮತಿ ಪಾರ್ವತಿ, ಶ್ರೀ ಆನಂದ ಪೂಜಾರಿ, ಪುರುಷೋತ್ತಮ ಪೂಜಾರಿ, ಜಲಾನಯನ ಸಹಾಯಕರಾದ ವಿನೀತ್ ಜಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಮಾಯಾ ಕುಮಾರಿ ಅವರಿಗೆ ಜಲಾನಯನ ಮಾರ್ಗದರ್ಶಕ ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.
ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ.ವೀಣಾ ಕೆ ಆರ್ ಸ್ವಾಗತಿಸಿದರು. ಜಂಟಿ ಕೃಷಿ ನಿರ್ದೇಶಕರಾದ ಹೊನ್ನಪ್ಪ ಗೋವಿಂದೇ ಗೌಡ ರವರು ಪ್ರಸ್ತಾವನೆಗೈದರು. ಕೃಷಿ ಅಧಿಕಾರಿ ನಂದನ್ ಶೆಣೈ ಪಿ ಕಾರ್ಯಕ್ರಮ ನಿರ್ವಹಿಸಿದರು. ಆತ್ಮ ಯೋಜನೆ ಎಟಿಯಂ ಹನಮಂತ ಕಾಳಗಿ ರವರು ಭೂಮಿ ಮತ್ತು ಜಲ ಸಂರಕ್ಷಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಗಮನಸೆಳೆದ ಜಾಥಾ- ಜಾಗೃತಿ ಯಕ್ಷಗಾನ
ಕಾರ್ಯಕ್ರಮಕ್ಕೆ ಮುನ್ನ ಮಾರ್ನಬೈಲು ದ್ವಾರದ ಬಳಿಯಿಂದ ಸಜಿಪಮೂಡ ಪಂಚಾಯತ್ ರವರೆಗೆ ಜಲಾನಯನ ಜಾಥಾ ಕರ್ಯಕ್ರಮ ಆಯೋಜಿಸಲಾಯಿತು. ಯಾತ್ರೆ ಕರ್ಯಕ್ರಮದ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಮಣ್ಣು ಮತ್ತು ನೀರು ಸಂರಕ್ಷಣೆ ವಿಷಯದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಕರ್ಯಕ್ರಮದ ನಿಮಿತ್ತ ಪಂಚಾಯತ್ ಮುಂಭಾಗದಲ್ಲಿ ಸಪೋಟ ಗಿಡ ನಾಟಿ ಮಾಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು.
ಜಲಾನಯನ ಯೋಜನೆಯಡಿ ಕಂದೂರಿನ ಪದ್ಮನಾಭ ಕುಂದರ್ ರವರ ಜಮೀನಿನಲ್ಲಿ ರಚಿಸಲಾದ ಕಿಂಡಿಅಣೆಕಟ್ಟು ಕಾಮಗಾರಿಗೆ ಬಾಗಿನ ಅರ್ಪಿಸಲಾಯಿತು. ಬಳಿಕ ಸಂಸಾರ ಜೋಡುಮಾರ್ಗದ ನಿರ್ದೇಶಕ ಮೌನೇಶ ವಿಶ್ವಕರ್ಮ ಅವರ ಸಂಯೋಜನೆಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಯ ಕುರಿತಾದ ಜಲ ಉಜ್ಜಲ ಎಂಬ ಯಕ್ಷಗಾನನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.