ಉಪ್ಪಿನಂಗಡಿ, ಜೂ 14 (Daijiworld News/MSP): ಪೆರಿಯಡ್ಕ ಬಳಿಯ ಕುಂಟಿನಿ ಎಂಬಲ್ಲಿ ಕಾಲೇಜಿಗೆ ಹೋಗುವ ಮುನ್ನ ಡೈರಿಗೆ ಹಾಲು ಕೊಟ್ಟು ಹೋಗು ಎಂದು ಮನೆಯವರು ಸೂಚಿಸಿದ್ದಕ್ಕೆ ಮನ ನೊಂದು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಬಜತ್ತೂರು ನಿವಾಸಿ ಕುವೆಚ್ಚಾರು ನಿವಾಸಿ ಮೋನಪ್ಪ ಗೌಡ ಎಂಬವರ ಪುತ್ರಿ ತೇಜ ಕುಮಾರಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ದ್ವಿತೀಯ ಪಿಯುಸಿ ತೇರ್ಗಡೆಯಾಗಿರುವ ಈಕೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ ವಿಭಾಗಕ್ಕೆ ಸೇರ್ಪಡೆಗೊಂಡಿದ್ದಳು.
ಗುರುವಾರ ತನಗೆ ಕಾಲೇಜಿಗೆ ಹೋಗಲಿದೆ ಎಂದು ತಿಳಿಸಿದಾಗ ಮನೆಯವರು ಹಾಲನ್ನು ಪೆರಿಯಡ್ಕದ ಹಾಲಿನ ಡೈರಿಗೆ ಹಾಲು ಹಾಕಿ ಕಾಲೇಜಿಗೆ ಹೋಗು ಎಂದು ಸೂಚಿದ್ದರು. ನಿರಾಕರಿಸಿದ ಈಕೆಯನ್ನು ಒತ್ತಾಯಿಸಿ ಕಳುಹಿಸಿದ್ದು, ಇದೇ ಕಾರಣಕ್ಕೆ ಮನನೊಂದು ಪೆರಿಯಡ್ಕದ ಹಾಲಿನ ಡೈರಿಗೆ ಹಾಲು ನೀಡಿ ಹಿಂತಿರುಗುವಾಗ ಖಾಸಗಿ ವ್ಯಕ್ತಿಯೊಬ್ಬರ ಗೇರಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.