ಉಡುಪಿ, ಮಾ.02(DaijiworldNews/TA) : ನಾನು ಯಾರಿಗೂ ಕಂಡೀಶನ್ ಹಾಕಿಲ್ಲ. ಕಂಡಿಷನ್ ಹಾಕುವ ಅವಶ್ಯಕತೆ ನನಗೆ ಇಲ್ಲ. ನಾನೊಬ್ಬ ಕಾಂಗ್ರೆಸ್ ನ ಕಾರ್ಯಕರ್ತ. ಪಕ್ಷ ಏನು ಹೇಳುತ್ತದೆ, ಅಷ್ಟು ಕೆಲಸ ಮಾಡುವವನು. ಅಷ್ಟು ಬಿಟ್ಟರೆ ನಾನು ಬೇರೆ ಏನು ಕೆಲಸ ಮಾಡಲ್ಲ ಎಂದು ಉಡುಪಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು.

'

ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೆಹಲಿ ಭೇಟಿ ವಿಚಾರದ ಬಗ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಕಂಡಿಶನ್, ಬ್ಲಾಕ್ ಮೇಲು ನನ್ನ ಬ್ಲಡ್ ನಲ್ಲಿ ಇಲ್ಲ. ನಾನು ಕಾಂಗ್ರೆಸ್ ನ ಪ್ರಾಮಾಣಿಕ ಕಾರ್ಯಕರ್ತ. ನನ್ನ ಡೆಡಿಕೇಶನ್ ಪಕ್ಷಕ್ಕೆ. ಬಿಜೆಪಿಯವರು ಕನ್ಫ್ಯೂಷನ್ ಆಗಲೇಬೇಕಿಲ್ಲ. ನನ್ನ ಬಗ್ಗೆ ಮಾತನಾಡಿಲ್ಲ ಅಂದ್ರೆ ಕೆಲವರಿಗೆ ಸಮಾಧಾನ ಇರೋದಿಲ್ಲ. 2028ರಲ್ಲಿ ಕಾಂಗ್ರೆಸ್ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರಲಿದೆ. ಇಷ್ಟು ಮಾತ್ರ ನಾನು ಹೇಳುತ್ತೇನೆ ಎಂದು ತಿಳಿಸಿದರು.
ಅವರ ಇತ್ತೀಚಿನ ದೆಹಲಿ ಭೇಟಿ ಮತ್ತು ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಹೈಕಮಾಂಡ್ ಜೊತೆಗಿನ ಚರ್ಚೆಗಳ ಬಗ್ಗೆ ಕೇಳಿದಾಗ, ಶಿವಕುಮಾರ್ ಯಾವುದೇ ಒತ್ತಡದ ತಂತ್ರಗಳನ್ನು ದೃಢವಾಗಿ ನಿರಾಕರಿಸಿದರು. "ಷರತ್ತುಗಳು ಅಥವಾ ಬ್ಲ್ಯಾಕ್ಮೇಲ್ಗಳ ಪ್ರಶ್ನೆಯೇ ಇಲ್ಲ ಅದು ನನ್ನ ರಕ್ತದಲ್ಲಿಲ್ಲ. ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ, ಮತ್ತು ನನ್ನ ಸಮರ್ಪಣೆ ಪಕ್ಷಕ್ಕೆ ಮತ್ತು ಗಾಂಧಿ ಕುಟುಂಬಕ್ಕೆ. ಭಾವಿಸುವವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ" ಎಂದು ಅವರು ಹೇಳಿದರು.
ಇನ್ನು ಬಿಜೆಪಿ ನಾಯಕರು ಗೊಂದಲಕ್ಕೆ ಒಳಗಾಗುವುದು ನಿಶ್ಚಿತ, ಕೆಲವರು ನನ್ನ ಬಗ್ಗೆ ಊಹಾಪೋಹ ಮಾಡದ ಹೊರತು ಸುಮ್ಮನಿರಲು ಸಾಧ್ಯವಿಲ್ಲ, ಟಿವಿ ಚಾನೆಲ್ಗಳು ಮತ್ತು ಪತ್ರಿಕೆಗಳು ನಮ್ಮ ಸುದ್ದಿಯನ್ನು ಪ್ರಸಾರ ಮಾಡದಿದ್ದರೆ ಅವರ ಟಿಆರ್ಪಿ ಹೆಚ್ಚಾಗುವುದಿಲ್ಲ, 2028 ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಾನು ಹೇಳಬೇಕಾಗಿರುವುದು ಇಷ್ಟೇ. ಎಂದು ಅವರು ತಿಳಿಸಿದ್ದಾರೆ.
ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಮಾತನಾಡುವ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಶಿಳ್ಳೆ ಹೊಡೆದರು. ಶಿಳ್ಳೆ ಹೊಡೆಯುವುದನ್ನು ನಿಲ್ಲಿಸಿ, ಕಾಂಗ್ರೆಸ್ ಕಚೇರಿ ದೇವಸ್ಥಾನವಿದ್ದಂತೆ, ಪಕ್ಷದ ಕಚೇರಿಗೆ ಗೌರವ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು.