ಮಂಗಳೂರು, ಮಾ.03(DaijiworldNews/AK): ಸಿಐಎಸ್ಎಫ್ ಮಹಿಳಾ ಅಧಿಕಾರಿಯೊಬ್ಬರು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶದ ಯುವಕ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಘಾಜಿಪುರದ ಅಭಿಷೇಕ್ ಸಿಂಗ್ (40) ಎಂದು ಮೃತ ವ್ಯಕ್ತಿ. ನಗರದ ರಾವ್ ಮತ್ತು ರಾವ್ ಸರ್ಕಲ್ ಬಳಿಯ ಲಾಡ್ಜ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತ್ಮಹತ್ಯೆಗೂ ಮೊದಲು ಅಭಿಷೇಕ್ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾರೆ.
ಚೆನ್ನೈನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅಭಿಷೇಕ್, ಪ್ರದರ್ಶನದಲ್ಲಿ ಭಾಗವಹಿಸಲು ತನ್ನ ಸಹೋದ್ಯೋಗಿಗಳೊಂದಿಗೆ ಮಂಗಳೂರಿಗೆ ಅಗಮಿಸಿದ್ದರು.
ವಿಡಿಯೋದಲ್ಲಿ ಅಭಿಷೇಕ್, ಸಿಐಎಸ್ಎಫ್ ಸಹಾಯಕ ಕಮಾಂಡೆಂಟ್ ಮೋನಿಕಾ ಸಿಹಾಗ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ್ದಾರೆ. ವಿವಾಹಿತರಾಗಿದ್ದರೂ, ಮೋನಿಕಾ ವಿವಾಹಿತೆಯಾಗಿದ್ದು, ಆ ವಿಷಯವನ್ನು ಮುಚ್ಚಿಟ್ಟು ತನ್ನೊಂದಿಗೆ ಸಂಬಂಧ ಬೆಳೆಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಅಭಿಷೇಕ್ ಸಾವಿನ ಸುತ್ತಲಿನ ಆರೋಪಗಳು ಮತ್ತು ಸಂದರ್ಭಗಳ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.