ಮಂಗಳೂರು, ಮಾ.05(DaijiworldNews/TA): ಜಿಲ್ಲಾ ಕಾರಾಗೃಹದಲ್ಲಿ ಆಹಾರ ಸೇವಿಸಿದ ಖೈದಿಗಳು ಅಸ್ವಸ್ಥಗೊಂಡ ಪ್ರಕರಣದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಬುಧವಾರ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಖೈದಿಗಳು ಅಸ್ವಸ್ಥಗೊಂಡಿದ್ದು, ಬಳಿಕ ಕೆಲವರು ಹೊಟ್ಟೆ ನೋವು ಎಂದು ಖೈದಿಗಳು ದೂರು ನೀಡಿದ್ದಾರೆ. ಸಂಜೆ ಸುಮಾರು 4-30ರ ಬಳಿಕ 40 ಕ್ಕೂ ಅಧಿಕ ಖೈದಿಗಳಿಗೆ ಹೊಟ್ಟೆ ನೋವು, ವಾಂತಿ ಭೇದಿ ಶುರುವಾಗಿದೆ. ನಮ್ಮ ಪೊಲೀಸ್ ವ್ಯಾನ್ ಮೂಲಕ ಎಲ್ಲಾ ಖೈದಿಗಳನ್ನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಅರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು ಜೈಲಿಗೆ ಭೇಟಿ ನೀಡಿದ್ದಾರೆ.
ನೀರಿನ ಸ್ಯಾಂಪಲ್ ಹಾಗು ಆಹಾರವನ್ನ ಪರಿಶೀಲನೆ ಮಾಡಿದ್ದಾರೆ. ಅಸ್ವಸ್ಥಗೊಂಡಿರುವವರು ಪೈಕಿ ಓರ್ವ ಖೈದಿಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ICU ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರು 44 ಜನ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.