ಸುಳ್ಯ, ಮಾ.06(DaijiworldNews/TA): ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿ ತಪ್ಪಿದ ಪರಿಣಾಮ 20 ಅಡಿ ಗಾತ್ರದ ಕಂಟೈನರ್ ಒಂದು ರಸ್ತೆಯಿಂದ ಪಲ್ಟಿಯಾಗಿ ರಸ್ತೆಯ ಪಕ್ಕದ ಪಿಎಲ್ ಡಿ ಬ್ಯಾಂಕ್ ನ ತಡೆಗೋಡೆಗೆ ಅಪ್ಪಳಿಸಿ ತಡೆಗೋಡೆ ಹಾನಿಯಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ರಸ್ತೆಯ ಬದಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಸ್ಕೂಟಿಯೊಂದು ಕಂಟೈನರ್ ಅಡಿಗೆ ಸಿಲುಕಿದೆ ಎನ್ನಲಾಗಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಚಾಲಕ ಪಾರಾಗಿದ್ದು. ಕಂಟೈನರ್ ಚಾಲಕನ ನಿದ್ದೆ ಮಂಪರು ನಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.