ಮಂಗಳೂರು, ಮಾ.06(DaijiworldNews/TA): ನಗರದಲ್ಲಿ ಸಂಚರಿಸುವ ಸಿಟಿ ಬಸ್ಗಳಲ್ಲಿ ನಿರ್ವಾಹಕರು ಕಡ್ಡಾಯವಾಗಿ ಟಿಕೆಟ್ ನೀಡುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.

ಒಂದು ವೇಳೆ ಟಿಕೆಟ್ ನೀಡದ ಬಸ್ಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಈವರೆಗೆ ಸುಮಾರು 20 ಬಸ್ಗಳಿಗೆ ದಂಡ ವಿಧಿಸಲಾಗಿದೆ. ಮಂಗಳೂರಿನ ಅನೇಕ ಸಿಟಿ ಬಸ್ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿಲ್ಲ ಎಂಬ ದೂರುಗಳು ಅನೇಕ ವರ್ಷಗಳಿಂದ ಕೇಳಿ ಬಂದಿತ್ತು.
ಟಿಕೆಟ್ ನೀಡುವಂತೆ ನಿರ್ವಾಹಕ ರಿಗೆ ಬಸ್ ಮಾಲಕರ ಸಂಘದಿಂದಲೂ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಮುಂದಾಗಿದೆ.