ಉಡುಪಿ, ಮಾ.06 (DaijiworldNews/AA): ಉಡುಪಿ ಅಂಬಲಪಾಡಿಯ ಗ್ಲೋವಿನ್ಸ್ಟಾರ್ ಇಂಟಿಗ್ರೇಟೆಡ್ ಸ್ಕೂಲ್ನ ೯ನೇ ತರಗತಿಯ ರೂಪೇಶ್ ಎನ್ ಸಾಲಿಯಾನ್ ಎಂಬ ವಿದ್ಯಾರ್ಥಿ ಒಂದು ನಿಮಿಷದಲ್ಲಿ (ಹದಿಹರೆಯದವರು) ಗರಿಷ್ಠ ಪುಶ್ ಅಪ್ಗಳನ್ನು ಮಾಡುವ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಒಂದು ನಿಮಿಷದಲ್ಲಿ 109 ಪುಶ್ ಅಪ್ಗಳನ್ನು ಪ್ರದರ್ಶಿಸಿದ ಅವರು ಒಂದು ನಿಮಿಷದಲ್ಲಿ 104 ಪುಶ್ ಅಪ್ಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಅಂತರರಾಷ್ಟ್ರೀಯ ದಾಖಲೆಗಳ ಪುಸ್ತಕವು ಯುವ ಪ್ರತಿಭೆ ರೂಪೇಶ್ ಅವರಿಗೆ ಪ್ರಮಾಣಪತ್ರ ಮತ್ತು ಪದಕ ನೀಡಿ ಗೌರವಿಸಿದೆ. ರೂಪೇಶ್ ಎನ್. ಸಾಲಿಯಾನ್ ಅವರು ಈ ವಿಶ್ವ ದಾಖಲೆಯನ್ನು ಸಾಧಿಸಿದಾಗ 15 ವರ್ಷ, 2 ತಿಂಗಳು ಮತ್ತು 28 ದಿನ ವಯಸ್ಸಿನವರಾಗಿದ್ದರು.