ಮಂಗಳೂರು, ಮಾ.07(DaijiworldNews/TA): ಅಖಿಲ ಭಾರತೀಯ ಕಾಮಗಾರಿ ಮಜ್ದೂರ್ ಮಹಾಸಂಘದ 9ನೇ ತ್ರೈಮಾಸಿಕ ಅಧಿವೇಶನವು ಮಂಗಳೂರಿನ ಸಂಘ ನಿಕೇತನದಲ್ಲಿ ಮಾರ್ಚ್ 8 ಹಾಗೂ 9ರಂದು ನಡೆಯಲಿದೆ ಎಂದು ಮಹಾಸಂಘದ ನಾಯಕರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರೊಬ್ಬರು, ಸುಮಾರು 25 ರಾಜ್ಯಗಳಿಂದ ಸುಮಾರು 500 ಜನ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಆಶ್ರಯದಲ್ಲಿ ಸಮಾವೇಶ ನಡೆಯಲಿದೆ. ಅಧಿವೇಶನದಲ್ಲಿ ಕಟ್ಟಡ ಕಾರ್ಮಿಕರ ಸಮಸ್ಯೆಗಳು, ಪ್ರಮುಖವಾಗಿ ವಲಸೆ ಕಾರ್ಮಿಕರ ಸಮಸ್ಯೆ, ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ನಡೆಯುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಕರಡು ನಿರ್ಣಯಗಳನ್ನು ಮಂಡಿಸಲಾಗುವುದು ಎಂದು ಅವರು ತಿಳಿಸಿದರು.
ಇನ್ನು ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಉಪಾಧ್ಯಕ್ಷ, ಅಸಂಘಟಿತ ಕ್ಷೇತ್ರದ ಪ್ರಭಾರಿ ಜಯಂತಿಲಾಲ್ ಜೀ, ಅಖಿಲ ಭಾರತೀಯ ಮಜ್ದೂರ್ ಸಂಘದ ಉದ್ಯೋಗ ಪ್ರಭಾರಿ ಹಾಗೂ ಅಸಂಘಟಿತ ಕ್ಷೇತ್ರದ ಪ್ರಭಾರಿ ಜಯಂತ್ ದೇಶ್ ಪಾಂಡೆ ಮುಂತಾದವರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.