ಉಡುಪಿ, ಮಾ.10(DaijiworldNews/TA): ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದಾಗಿ ಕೆಳ ಪರ್ಕಳದಲ್ಲಿ ಕಾರು ಪಲ್ಟಿ ಹೊಡೆದು ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಅಪಘಾತಗೊಂಡ ಕಾರಿನಲ್ಲಿ ಮಹಾರಾಷ್ಟ್ರ ನೋಂದಣಿಯ ವಿವಿಧ ನಂಬರ್ ಪ್ಲೇಟ್ ಗಳು ಪತ್ತೆ ಆಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.


ಪರ್ಕಳದ ಈಶ್ವರ ನಗರದಲ್ಲಿ ನಗರಸಭೆಯ ಕುಡಿಯುವ ನೀರಿನ ಪಂಪ್ ಹೌಸ್ ನ ಎದುರು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದವರ ಕೈ ಮುರಿತವಾಗಿದೆ. ಕಾರು ಮಹಾರಾಷ್ಟ್ರ ಮೂಲದ ರಿಜಿಸ್ಟ್ರೇಷನ್ ಹೊಂದಿತ್ತು.
ಅಪಘಾತಗೊಂಡ ಕಾರನ್ನು ಪರಿಶೀಲಿಸಿದಾಗ ಅದರೊಳಗೆ ವಿವಿಧ ನಂಬರ್ ಪ್ಲೇಟ್ ಗಳು ಪತ್ತೆಯಾಗಿದ್ದು ಅಪರಾಧಿ ಕೃತ್ಯಕ್ಕೆ ಈ ಕಾರು ಬಳಕೆ ಆಗಿರಬಹುದು ಎಂಬ ಸಂಶಯ ಮೂಡಿದೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು ಮಣಿಪಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.