ಪುತ್ತೂರು, ಮಾ.10(DaijiworldNews/TA): ಬಂಟ್ವಾಳ ತಾಲೂಕಿನ ಬಾಕ್ರಬೈಲು ನಿವಾಸಿ, ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ (91) ಸೋಮವಾರ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಸುಬ್ಬಯ್ಯ ಶೆಟ್ಟಿ 1972 ಮತ್ತು 1978 ರಲ್ಲಿ ಎರಡು ಅವಧಿಯಲ್ಲಿ ಸುರತ್ಕಲ್ ಶಾಸಕರಾಗಿ ಸೇವೆ ಸಲ್ಲಿಸಿದ್ದರು ಮತ್ತು ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ಕ್ಯಾಬಿನೆಟ್ನಲ್ಲಿ ಸಚಿವರಾಗಿದ್ದರು, ಭೂಸುಧಾರಣೆ ಮತ್ತು ಶಿಕ್ಷಣ ಖಾತೆಗಳ ಸಚಿವರಾಗಿ ಸೇವೆಸಲ್ಲಿಸಿದ್ದರು. ಅವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಮತ್ತು ನಂತರ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು.
ಆರಂಭದಲ್ಲಿ ಅವರು ಸಿಬಿಐ ಹುದ್ದೆಗೆ ನೇಮಕಗೊಂಡು ಕಾಶ್ಮೀರ ಮತ್ತು ಲಡಾಖ್ನಲ್ಲಿ ಸೇವೆ ಸಲ್ಲಿಸಿ ನಂತರ ರಾಜೀನಾಮೆ ನೀಡಿ ಕಾನೂನು ವೃತ್ತಿಯನ್ನು ಆರಂಭಿಸಿದರು. ನಂತರ ರಾಜಕೀಯ ಪ್ರವೇಶಿಸಿ ಸುಮಾರು ಹತ್ತು ವರ್ಷಗಳ ಕಾಲ ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸಿದರು.
ಅವರ ಕೊಡುಗೆಗಳನ್ನು ಗುರುತಿಸಿ, ಅವರಿಗೆ ಡಿ ದೇವರಾಜ್ ಅರಸು ಪ್ರಶಸ್ತಿ, ಶಾಂತವೇರಿ ಗೋಪಾಲ್ ಪ್ರಶಸ್ತಿ ಮತ್ತು ಡಾ. ದಾ.ರಾ. ಬೇಂದ್ರೆ ಪ್ರಶಸ್ತಿ ಸೇರಿದಂತೆ ಇತರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಮೃತರು ಮಕ್ಕಳಾದ ಉಮಾ ಸವಣೂರು ಮತ್ತು ರೇಷ್ಮಾ ಸವಣೂರು ಅವರನ್ನು ಅಗಲಿದ್ದಾರೆ.