ಸುಳ್ಯ, ಮಾ.12 (DaijiworldNews/AK): ಸರ್ಪ ಸಂಸ್ಕಾರ ಸೇವೆಯನ್ನು ಮಾಡಲು ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಗಮಿಸಿದ್ದಾರೆ.


ಮಾರ್ಚ್ 11 ರಂದು, ಕತ್ರಿನಾ ಅತಿಥಿ ಗೃಹದಿಂದ ಕಾರಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದರು, ತಲೆಗೆ ದುಪಟ್ಟಾ ಮುಚ್ಚಿಕೊಂಡು ಓಡಾಡುತ್ತಿದ್ದಾರೆ.
ಆದಿ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರದ ಜೊತೆಗೆ, ಅವರು ನಾಗಪ್ರತಿಷ್ಠೆ, ಸಂಕಲ್ಪ, ಮತ್ತು ಆಶ್ಲೇಷ ಬಲಿ ಸೇರಿದಂತೆ ಹಲವಾರು ಸೇವೆಯಲ್ಲಿ ಭಾಗವಹಿಸಲಿದ್ದಾರೆ.
ಕೆಲ ತಿಂಗಳ ಹಿಂದೆ ಕತ್ರೀನಾ ಕುತ್ಯಾರಿನಲ್ಲಿರುವ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.