ಮಂಗಳೂರು,ಮಾ.13 (DaijiworldNews/AK): ಕಳೆದ ಎರಡು ವಾರಗಳಿಂದ ಬಿಸಿಲಿನ ಬೇಗೆಯಿಂದ ತತ್ತರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಬುಧವಾರ ಸಂಜೆ ಗಾಳಿ, ಗುಡುಗು, ಸಿಡಿಲುಗಳಿಂದ ಕೂಡಿದ ಭಾರೀ ಮಳೆಯಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನ ಕಕ್ಕಿಂಜೆಯಲ್ಲಿ ಆಲಿಕಲ್ಲಿನ ಮಳೆಯಾಗಿದೆ.





ಬಿಸಿಲಿನ ಶಾಖದ ಹೊಡೆತದ ಎಚ್ಚರಿಕೆಗಳ ನಡುವೆಯೂ ಹಠಾತ್ ಮಳೆಯು ನಿವಾಸಿಗಳನ್ನು ಅಚ್ಚರಿಗೊಳಿಸಿತ್ತು. ಬೆಳಗ್ಗೆಯಿಂದ ಮಳೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಹಲವಾರು ಸ್ಥಳಗಳಲ್ಲಿ ಮೋಡಗಳ ರೂಪದಲ್ಲಿ ಮಳೆ ಬೀಳುವ ಯಾವುದೇ ಮುನ್ಸೂಚನೆ ಇರಲಿಲ್ಲ. ಆದಾಗ್ಯೂ, ಸಂಜೆಯ ಹೊತ್ತಿಗೆ, ಸುರಿದ ಮಳೆ ತಂಪು ಮಾಡಿತ್ತು. ಕಕ್ಕಿಂಜೆ, ಮುಂಡಾಜೆ ಮತ್ತು ಸೋಮನಡ್ಕ ಸೇರಿದಂತೆ ಬೆಳ್ತಂಗಡಿಯ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯಾದರೆ. ಇನ್ನು ಪುತ್ತೂರು, ಉಪ್ಪಿನಂಗಡಿ, ಸುಬ್ರಮಣ್ಯ, ಕಡಬ, ಸೇರಿದಂತೆ ಹಲವು ಕಡೆ ಗಾಳಿ ಸಹಿತ ಭಾರೀ ಮಳೆ ಸುರಿದಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಪೂರ್ವ ಮಾನ್ಸೂನ್ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿತ್ತು. ಮಾರ್ಚ್ 11 ರಂದು ಮಳೆ ಪ್ರಾರಂಭವಾಗಿ ಮಾರ್ಚ್ 12 ರವರೆಗೆ ಮಳೆಯಾಗುವ ನಿರೀಕ್ಷೆಯಿದ್ದರೂ, ಮಾರ್ಚ್ 18 ರಂದು ಕರಾವಳಿ ಕರ್ನಾಟಕ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಮಳೆ ಪ್ರಾರಂಭವಾಗಬಹುದು ಎಂದು ಮುನ್ಸೂಚನೆ ನೀಡಲಾಗಿತ್ತು.