ಬ್ರಹ್ಮಾವರ , ಮಾ.14 (DaijiworldNews/AK): ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಬಹುಕೋಟಿ ವಂಚನೆ ಆರೋಪ ಮತ್ತು ಅದರ ತನಿಖೆ ವಿಳಂಬ ನೀತಿಯ ವಿರುದ್ಧ ಅನ್ನದಾತರ ಆಹೊರಾತ್ರಿ ಸತ್ಯಾಗ್ರಹ 21 ನೇ ದಿನಕ್ಕೆ ಕಾಲಿಟ್ಟಿದೆ.

ಉಡುಪಿ ಜಿಲ್ಲಾ ಕೃಷಿ ಸಂಘದ ಅಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿ ಯವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ನ್ಯಾಯ ಸಿಗುವ ತನಕ ನಮ್ಮ ಈ ಹೋರಾಟ ನಿಲ್ಲಿಸುವುದಿಲ್ಲ ಎಂದು ಅನ್ನದಾತರು ಹೋರಾಟ ಮುಂದುವರೆಸಿದ್ದಾರೆ.
ಸಕ್ಕರೆ ಕಾರ್ಖಾನೆಯಿಂದ ಅನೇಕ ಬಡ ಕುಟುಂಬಗಳು ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗಿದ್ದು, ಅನ್ನದಾತರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇತ್ತ ಅಧಿಕಾರಿಗಳು ಸುಮ್ಮನಿದ್ದು ನ್ಯಾಯವನ್ನು ಯಾವಾಗ ಕೊಡಿಸುತ್ತಾರೆ ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದುಬಿಟ್ಟಿದೆ ಎಂಬ ಆಕ್ರೋಶ ಪ್ರತಿಭಟನಕಾರರದಾಗಿದೆ.