ಸುಳ್ಯ, ಮಾ.15(DaijiworldNews/AK) ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾ.15ರಿಂದ 18ರ ತನಕ ನಡೆಯಲಿದ್ದು ಎಲ್ಲಾ ಸಿದ್ದತೆಗಳು ನಡೆಯುತ್ತಿವೆ.

ದೈವಸ್ಥಾನದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳು ನಡೆದು ದೈವಂಕಟ್ಟು ಮಹೋತ್ಸವಕ್ಕೆ ತಯಾರು ನಡೆಸಲಾಗುತ್ತಿದೆ. ಎಲ್ಲರ ಸಹಕಾರದಲ್ಲಿ ಉತ್ಸವ ನಡೆಯಲಿದ್ದು, 4 ದಿನದ ಉತ್ಸವದಲ್ಲಿ ಸುಮಾರು ಎಂಬತ್ತು ಸಾವಿರದಿಂದ ಒಂದು ಲಕ್ಷಕ್ಕೂ ಮಿಕ್ಕಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಪಾರ್ಕಿಂಗ್, ಊಟದ ವ್ಯವಸ್ಥೆ, ಜನರಿಗೆ ಕುಳಿತು ಕೊಳ್ಳುವ ವ್ಯವಸ್ಥೆ ಸೇರಿ ಸಕಲ ವ್ಯವಸ್ಥೆಗಳು ನಡೆಯುತಿದ್ದು, ಸಮಿತಿಯವರಿಗೆ ಭಕ್ತರು ಹಾಗೂ ಊರವರು ಸಹಕಾರ ನೀಡುತ್ತಿದ್ದಾರೆ.