ಕುಂದಾಪುರ, ಮಾ.17 (DaijiworldNews/AA): ವೇಗವಾಗಿ ಬಂದ ಬೊಲೆರೊ ಪಿಕಪ್ ನಿಯಂತ್ರಣ ತಪ್ಪಿ ಬಸ್ ನಿಲ್ದಾಣದೊಳಗೆ ತೆರಳಲು ಸಿದ್ಧವಾಗಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಆಕೆ ಸಾವನ್ನಪ್ಪಿದ ಘಟನೆ ಕುಂದಾಪುರದ ಮರವಂತೆಯಲ್ಲಿ ಇಂದು ಸಂಭವಿಸಿದೆ.




ಮಹಿಳೆ ರಸ್ತೆ ದಾಟುತ್ತಿದ್ದು, ಬಸ್ ನಿಲ್ದಾಣದ ಒಳಗೆ ಪ್ರವೇಶಿಸಲು ಕೆಲವೇ ಹೆಜ್ಜೆಗಳು ಬಾಕಿ ಇದ್ದವು. ಈ ವೇಳೆ ಅತಿ ವೇಗವಾಗಿ ಬಂದ ವಾಹನ ಫುಟ್ಪಾತ್ಗೆ ನುಗ್ಗಿ ಆಕೆಗೆ ಡಿಕ್ಕಿ ಹೊಡೆದಿದೆ. ದುರದೃಷ್ಟವಶಾತ್, ಗಾಯಗೊಂಡಿದ್ದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.