ಉಡುಪಿ,ಮಾ.22(DaijiworldNews/TA) : ಮೀನುಗಾರ ಮಹಿಳೆಯರ ಬಂಧನ ವಿಚಾರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಮೀನುಗಾರರು ಮಲ್ಪೆ ಬಂದರಿನಲ್ಲಿ ಪೊಲೀಸ್ ವೈಫಲ್ಯ ವಿರುದ್ಧ ಕಿಡಿ ಕಾರಿದ್ದಾರೆ.

ಮಹಿಳೆ ಮೇಲೆ ಹಲ್ಲೆ ನಡೆಸಿರುವುದು ತಪ್ಪು ಒಪ್ಪಿಕೊಳ್ಳುತ್ತೇವೆ ಆದರೆ ಅನಗತ್ಯ ಜಾತಿ ನಿಂದನೆ ಕೇಸು ಹಾಕಿರೋದು ಸರಿಯಲ್ಲ, ಜಾತಿ ನಿಂದನೆ ಕೇಸು ಹಾಕಿ ಅಮಾಯಕ ಮೀನುಗಾರ ಮಹಿಳೆಯರನ್ನು ಜೈಲಿನಲ್ಲಿ ಇರಿಸಲಾಗಿದೆ. ಮೀನುಗಾರರ ಸಂಘ ನಿಡುವ ಗಡುವಿನೊಳಗೆ ಕೇಸು ವಾಪಸ್ ಪಡೆಯಬೇಕು. ಕೇಸ್ ವಾಪಸ್ ಪಡೆಯದಿದ್ದಲ್ಲಿ ಪೊಲೀಸ್ ಠಾಣೆ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಡಿಸಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ. ಹಲ್ಲೆಗೊಳಗಾದ ಮಹಿಳೆ ಕದ್ದದ್ದನ್ನು ಒಪ್ಪಿಕೊಂಡಿದ್ದಾಳೆ. ಕೇಸು ನಡೆಯುವುದು ಆ ಮಹಿಳೆಗೆ ಬೇಕಾಗಿಲ್ಲ. ಮಲ್ಪೆ ಬಂದರಿಗೆ ಪೊಲೀಸ್ ಇಲಾಖೆ ಯಾವುದೇ ಭದ್ರತೆ ನೀಡಿಲ್ಲ. ಸಿ ಸಿ ಕ್ಯಾಮೆರಾ ಅಳವಡಿಸಿಲ್ಲ. ಈಗ ಪ್ರಕರಣದ ನೆಪದಲ್ಲಿ ಅಮಾಯಕ ಮೀನುಗಾರರನ್ನು ಹಿಂಸಿಸಲಾಗುತ್ತಿದೆ ಎಂದು ಮೀನುಗಾರಿಕಾ ಮುಖಂಡರು ಆಕ್ರೋಶ ಹೊರ ಹಾಕಿದರು.
ಇನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಮೀನುಗಾರಿಕೆ ಬಂದರು ಅಂದ್ರೆ ಏನೆಂದೇ ಗೊತ್ತಿಲ್ಲದವರು ಉಸ್ತುವಾರಿ ಮಂತ್ರಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕುಳಿತುಕೊಂಡು ದಿಗ್ಬ್ರಮೆಯಾಗಿದೆ ಎಂದು ಹೇಳಿಕೆ ಕೊಡುತ್ತಾರೆ. ಸಿಎಂ ಜಿಲ್ಲೆ ಮೈಸೂರಿನಲ್ಲಿ 300 ಮಂದಿ ಸೇರಿ ಪೊಲೀಸ್ ಸ್ಟೇಷನ್ ಗೆ ಬೆಂಕಿ ಹಾಕಿದಾಗ ಸಿದ್ದರಾಮಯ್ಯ ಗೆ ದಿಗ್ಭ್ರಮೆ ಆಗಿಲ್ಲವಾ? ನಿಮ್ಮ ಮನೆಗೆ ಕಳ್ಳರು ಹೋಗಿದ್ದರೆ ಪೂಜೆ ಮಾಡುತ್ತೀರಾ ಎಸ್ಪಿ ಅವರೇ ನಮ್ಮ ಮನೆಗೆ ಬಂದ ಕಳ್ಳರು ಬಂದರೆ ಕಟ್ಟಿ ಹಾಕುವುದಿಲ್ಲವೇ ಕಳ್ಳರನ್ನು ಕಟ್ಟಿ ಹಾಕದೆ ಮತ್ತೇನು ಮಾಡಬೇಕು. ಮಚ್ಚಿನಲ್ಲಿ, ತಲವಾರಿನಲ್ಲಿ ಹಲ್ಲೆ ಮಾಡಿದ್ದಾರಾ ಕಳ್ಳಿ ಎಂದು ಆರೋಪಿತ ವ್ಯಕ್ತಿಗೆ ಕೆನ್ನೆಗೆ ಎರಡು ಬಾರಿಸಿದ್ದಾರೆ ಅಷ್ಟೇ ಆ ಮಹಿಳೆ ಏನು ಆಕ್ಷೇಪ ಮಾಡಿಲ್ಲ..ನನಗೆ ಯಾವುದೇ ದ್ವೇಷ ಇಲ್ಲ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ ಈ ಎಸ್ಪಿ ಇರುವ ತನಕ ಸರ್ಕಾರ ಮೀನುಗಾರರ ವಿರೋಧಿಯಾಗಿರುತ್ತೆ ಈ ಘಟನೆಯನ್ನು ವಿರೋಧಿಸುವ ದಲಿತ ನಾಯಕರ ಕುಟುಂಬಗಳು ಉದ್ದಾರ ಆಗಿದ್ದು ಮಲ್ಪೆ ಬಂದರಿನಿಂದ ಜಿಲ್ಲೆಯಲ್ಲಿ ಡ್ರಗ್ಸ್ ಅನ್ನ ಕಂಟ್ರೋಲ್ ಮಾಡೋಕೆ ಎಸ್ ಪಿ ಗೆ ಆಗಲ್ಲ ಮಹಿಳೆಯರನ್ನು ಜೈಲಿಗೆ ತಳ್ಳುವ ಎಸ್ಪಿ ನಮ್ಮ ಉಡುಪಿಗೆ ಬೇಡ,ಸರ್ಕಾರ ಎಸ್ಪಿಯನ್ನು ವರ್ಗಾವಣೆ ಮಾಡಲೇಬೇಕು. ಮನುಷ್ಯತ್ವ ಇಲ್ಲದ ಎಸ್ಪಿ ನಮ್ಮ ಜಿಲ್ಲೆಗೆ ಅಗತ್ಯ ಇಲ್ಲ. ಎಸ್ ಪಿ ಕಚೇರಿ ಮುಂದೆ ಧರಣಿ ಮಾಡಲು ನಾನು ಸಿದ್ದ ಎಂದು ಆಕ್ರೋಶವನ್ನು ಹೊರಹಾಕಿದರು.
ಮಲ್ಪೆ ಬಂದರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ ಮಲ್ಪೆ ಹಲ್ಲೆ ಪ್ರಕರಣ ದುರದೃಷ್ಟಕರ ಘಟನೆ. ಆದರೆ ಸರಕಾರ ಮತ್ತು ಪೊಲೀಸ್ ಇಲಾಖೆ ನಡೆದುಕೊಂಡ ರೀತಿ ಒಪ್ಪಲು ಸಾಧ್ಯವಿಲ್ಲ. ಪೋಲಿಸ್ ವರಿಷ್ಠಾಧಿಕಾರಿಗಳು ಯಾವ ಆದರದಲ್ಲಿ ಜಾತಿನಿಂದಲೇ ಪ್ರಕರಣ ದಾಖಲಿಸಿದ್ದಾರೆ. ಕದ್ದಾಗ ಹೊಡೆದಿದ್ದಾರೆ ಆಕೆ , ಆಕೆ ದಲಿತ ಎಂದು ತಿಳಿದಿರಲಿಲ್ಲ. ಕಾನೂನು ಪಾಲನೆ ಮಾಡುತ್ತೇನೆ ಎನ್ನುವ ಎಸ್ ಪಿ ಕಾನೂನಿಗೆ ಸರಿಯಾಗಿ ನಡೆದುಕೊಳ್ಳಬೇಕು. ಮಲ್ಪೆ ಬಂದರಿನಲ್ಲಿ ರಾಜಿ ಪಂಚಾಯಿತಿಗೆ ಮೂಲಕ ತೀರ್ಮಾನವಾಗುತ್ತದೆ. ತನಿಖೆಗೆಂದು ಕರೆದು ಮೋಸದಿಂದ ಮಹಿಳೆಯರನ್ನು ಬಂಧಿಸಿದ್ದಾರೆ. ಫರ್ದರ್ ಸ್ಟೇಟ್ ಮೆಂಟ್ ಮಾಡಿ ಜಾತಿನಿಂದನೆ ಕೇಸ್ ವಾಪಸ್ ಪಡೆಯಬೇಕು. ಈ ಹಿಂದೆ ಮೀನುಗಾರರನ್ನು ಬಂಧಿಸುವ ಧೈರ್ಯ ಪೊಲೀಸ್ ಇಲಾಖೆಗೆ ಇರಲಿಲ್ಲ. ಮಲ್ಪೆ ಬಂದರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಮಾಡಲಾಗಿದೆ. ಎಸ್ ಪಿ ಮಾಡಿದ್ದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಬೇಕಾ. ನಾವು ಶಾಂತಿ ಪ್ರಿಯರಾಗಿದ್ದು ಜಾಸ್ತಿ ಆಯ್ತು.ಜಿಲ್ಲಾ ಎಸ್ ಪಿ ತುಘುಲಕ್ ದರ್ಬಾರ್ ನಡೆಸುತ್ತಿದ್ದಾರೆ.ಯಾವುದೇ ಪ್ರಕರಣ ನಡೆದಾಗ ಕಾನ್ಸ್ಟೇಬಲ್ ಗಳನ್ನು ಅಮಾನತು ಮಾಡುತ್ತಾರೆ. ಈ ಪ್ರಕರಣದಲ್ಲಿ ಎಸ್ಪಿ ಯನ್ನು ಸರ್ಕಾರ ಅಮಾನತು ಮಾಡಬೇಕು. ಎಸ್ ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಬರುತ್ತೇವೆ ಎಂದು ಕಿಡಿ ಕಾರಿದರು.