ಬೆಂಗಳೂರು: ಸೆ 11 : ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ಇಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಬೃಹತ್ ಪ್ರತಿರೋಧ ಸಮಾವೇಶ ಜರಗಲಿದೆ. ಹತ್ಯೆಯನ್ನು ಖಂಡಿಸಿ ನಾಡಿನ ವಿವಿಧ ಪ್ರಗತಿಪರ. ವಿದ್ಯಾರ್ಥಿ, ದಲಿತ, ರೈತಪರಸಂಘಟನೆಗಳು, ಸೇರಿ ಈ ಸಮಾವೇಶ ಆಯೋಜಿಸಿದೆ.
ಇನ್ನು ಈ ಸಮಾವೇಶದಲ್ಲಿಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್, ಸಹೋದರಿ ಕವಿತಾ ಲಂಕೇಶ್, ಸಿಪಿಎಂ ಮುಖಂಡ ಸೀತಾರಾಂ ಯೆಚೊರಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮುಂತಾದವರು ಬಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ರ್ಯಾಲಿ ಹೊರಟು ನಾನು ಗೌರಿ, ನಾವೆಲ್ಲರೂ ಗೌರಿ ಎಂಬ ಘೋಷಣೆಯೊಂದಿಗೆ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸಭೆ ಸೇರಲಿದ್ದು ಆ ಬಳಿಕ ಸಂಜೆ ೪ರವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಈ ಬೆನ್ನಲ್ಲೇ ರಾಜ್ಯ ಬಿಜೆಪಿ,ಗೌರಿ ಹತ್ಯೆ ಖಂಡನೀಯ, ಈ ಹತ್ಯೆ ಮುಂದಿಟ್ಟುಕೊಂಡು ಸಮಾವೇಶದಲ್ಲಿ ಆರ್ಎಸ್ಎಸ್ ವಿರುದ್ದ ಆರೋಪಗಳನ್ನು ಮಾಡಿದರೆ ಅಂಥವರ ವಿರುದ್ದ ಕಾನೂನು ರೀತಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದೆ.