ಉಡುಪಿ, ಮಾ.27 (DaijiworldNews/AA): ಕೇಂದ್ರ ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾದ ಕೊಂಕಣ ರೈಲ್ವೆ ನಿಗಮ ನಿಯಮಿತದ ನಿರ್ದೇಶಕರಾಗಿ (ಕಾರ್ಯಾಚರಣೆ ಮತ್ತು ವಾಣಿಜ್ಯ) ಸುನೀಲ್ ಗುಪ್ತಾ ಅವರನ್ನು ಸರ್ಕಾರ ನೇಮಿಸಿದೆ.

1998 ರ ಬ್ಯಾಚ್ನ ಹಿರಿಯ ಐಆರ್ಟಿಎಸ್ ಅಧಿಕಾರಿಯಾದ ಸುನೀಲ್ ಗುಪ್ತಾ ಅವರು ಪ್ರಧಾನ ಕಛೇರಿ ಉತ್ತರ ಪಶ್ಚಿಮ ರೈಲ್ವೆ, ಜೈಪುರದಲ್ಲಿ ಮುಖ್ಯ ಪ್ರಯಾಣಿಕರ ಸಾರಿಗೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಐದು ವರ್ಷಗಳ ಅವಧಿಗೆ ಕೊಂಕಣ ರೈಲ್ವೆ ನಿಗಮ ನಿಯಮಿತದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ನೇಮಕಾತಿಯನ್ನು ಸಂಪುಟ ನೇಮಕಾತಿ ಸಮಿತಿ (ಎಸಿಸಿ) ಮತ್ತು ರೈಲ್ವೆ ಸಚಿವರು ಅನುಮೋದಿಸಿದ್ದಾರೆ.
ಸುನಿಲ್ ಗುಪ್ತಾ ಅವರು ಭಾರತೀಯ ರೈಲ್ವೆಯಲ್ಲಿ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿಯನ್ನು ನಿರ್ವಹಿಸುವಲ್ಲಿ 25 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ. ರೈಲ್ವೆ ವಿಭಾಗಗಳು ಮತ್ತು ಪ್ರಧಾನ ಕಛೇರಿಯಲ್ಲಿ ಹಾಗೂ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ನ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿಯ ರಾಜಸ್ಥಾನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. ಅವರು INSEAD ಸಿಂಗಾಪುರ, ICLIF, ಕೌಲಾಲಂಪುರ್, ಮಲೇಷ್ಯಾ, ಸೌತ್ವೆಸ್ಟ್ ಜಿಯಾವೊಟಾಂಗ್ ವಿಶ್ವವಿದ್ಯಾಲಯ, ಚೆಂಗ್ಡು, ಚೀನಾ ಮತ್ತು ಆಂಟ್ವರ್ಪ್ ಪೋರ್ಟ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಬೆಲ್ಜಿಯಂ ಸೇರಿದಂತೆ ವಿವಿಧ ತರಬೇತಿಗಳನ್ನು ಪಡೆದಿದ್ದಾರೆ.