ಪುತ್ತೂರು, ಮಾ.28(DaijiworldNews/TA) : ಉಪ್ಪಿನಂಗಡಿಯ ಆದರ್ಶ ಗ್ರಾಮದಲ್ಲಿರುವ ಬಳ್ಳಿ ಆಯುರ್ ಗ್ರಾಮವು ಇದೀಗ ಆಯುರ್ವೇದ ವಿದ್ಯಾರ್ಥಿಗಳ ಹಾಗೂ ಸಸ್ಯ ಸಂಶೋಧಕರ ಪ್ರಿಯ ತಾಣವಾಗಿ ಮಾರ್ಪಟ್ಟಿದೆ. ದಿನಂಪ್ರತಿ ಇಲ್ಲಿಗೆ ಭೇಟಿ ನೀಡುತ್ತಿರುವ ಪರಿಸರ ಪ್ರಿಯ ಸಂಖ್ಯೆ ಹೆಚ್ಚುತ್ತಿದೆ. ಶಿಕ್ಷಣದ ಭಾಗವಾಗಿ ಗುಜರಾತಿನ ಪ್ರತಿಷ್ಠಿತ ಆಯುರ್ವೇದ ಸಂಶೋಧನಾ ಸಂಸ್ಥೆಯ (ITRA) ವಿದ್ಯಾರ್ಥಿಗಳು ಇತ್ತೀಚೆಗೆ ಬಳ್ಳಿ ಆಯುರ್ ಗ್ರಾಮಕ್ಕೆ ಭೇಟಿ ನೀಡಿದ್ದರು.

























800 ಕ್ಕೂ ಹೆಚ್ಚು ಜಾತಿಯ ಮರಗಳನ್ನು ಗುರುತಿಸಿ ಟ್ಯಾಗ್ ಮಾಡುವಲ್ಲಿ ಬಳ್ಳಿ ಆಯುರ್ ಗ್ರಾಮದ ಆಡಳಿತ ನಡೆಸಿದ ಪ್ರಯತ್ನವನ್ನು ಸಂಶೋಧನಾ ತಂಡವು ಪ್ರಶಂಸಿಸಿತು. ಪರಿಸರವನ್ನು ಸಸ್ಯಶಾಸ್ತ್ರ ಮತ್ತು ಆಯುರ್ವೇದದ ಜೀವಂತ ಪ್ರಯೋಗಾಲಯವಾಗಿ ಪರಿವರ್ತಿಸಿದ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ತಂಡ ಆಯುರ್ವೇದ ವಿಶ್ವವಿದ್ಯಾಲಯಗಳ ಪಠ್ಯ ಕ್ರಮಕ್ಕೆ ಬಳ್ಳಿ ಆಯುರ್ ಗ್ರಾಮ ಸೂಕ್ತ ಎಂದು ಅಭಿಪ್ರಾಯಪಟ್ಟಿತು.
ಇದೇ ಸಂದರ್ಭದಲ್ಲಿ ಬಳ್ಳಿ ಆಯುರ್ ಗ್ರಾಮದಲ್ಲಿ ನಿರ್ಮಿಸಿದ ವಿಶೇಷ ರಂಗಪೀಠವನ್ನು ಉದ್ಘಾಟಿಸಲಾಯಿತು. ಪ್ರಸಿದ್ಧ ಪರಿಸರ ತಜ್ಞೆ ಡಾ. ಸ್ಮಿತಾ ಹೆಗ್ಡೆ ಅವರು ರಂಗಪೀಠ ಸೌಲಭ್ಯವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಡಾ. ಸುಪ್ರೀತ್ (BAMS, PhD), ಡಾ. ಶೈನಿ ಮತ್ತು ಬಳ್ಳಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ನೂತನ ರಂಗಪೀಠವು ಪುಸ್ತಕ ಬಿಡುಗಡೆ, ಕವಿಗೋಷ್ಠಿ ಮತ್ತು ನೃತ್ಯಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲು ಸಜ್ಜಾಗಿದ್ದು ಸಂದರ್ಷಕರು ಇದರ ಲಾಭ ಪಡೆಯಬಹುದಾಗಿದೆ.
ವಾಸ್ತುಶಿಲ್ಪದ ಪ್ರಕಾರ, ಬಳ್ಳಿ ಆಯುರ್ ಗ್ರಾಮವು ಸಾಂಪ್ರದಾಯಿಕ 'ಚತುಶಾಲಾ' ವಿನ್ಯಾಸದೊಂದಿಗೆ ನಿರ್ಮಾಣಗೊಂಡಿದ್ದು , ಏಕಕಾಲದಲ್ಲಿ 21 ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. 2020-21 ರಲ್ಲಿ, ಪರಿಸರ ಪ್ರಜ್ಞೆಯ ಜೀವನ ಮತ್ತು ಕೃಷಿಗೆ ನೀಡಿದ ಕೊಡುಗೆಗಳನ್ನು ಗುರುತಿಸಿ, ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಿಂದ ಈ ಕೇಂದ್ರವು ಅತ್ಯುತ್ತಮ ಸಾವಯವ ರೈತ ಪ್ರಶಸ್ತಿಯನ್ನು ಪಡೆದು ಗೌರವಿಸಲ್ಪಟ್ಟಿದೆ.
ಭೇಟಿಗಾಗಿ ಸಂಪರ್ಕಿಸಿ : ಬಳ್ಳಿ ಆಯುರ್ ಗ್ರಾಮದ ಸ್ವಾಸ್ಥ್ಯ, ಪ್ರಕೃತಿ ಮತ್ತು ಸಂಸ್ಕೃತಿಯ ವಿಶಿಷ್ಟ ಮಿಶ್ರಣವನ್ನು ಅನುಭವಿಸಲು ಆಸಕ್ತಿ ಹೊಂದಿರುವವರು +91-08251-200100 ಅಥವಾ +91-9483930123 ಸಂಖ್ಯೆಗೆ ಕರೆಮಾಡಿ ಡಾ. ಸುಪ್ರೀತ್ ಅವರನ್ನು ಸಂಪರ್ಕಿಸಬಹುದು.