ಉಡುಪಿ, ಮಾ.28(DaijiworldNews/AK) : ಬೆಳ್ಮಣ್ ಹತ್ತಿರದ ಬೋಳ ಪರಿಸರದಲ್ಲಿ ಚಿರತೆಯೊಂದು ಕಾಣಿಸಿಕೊಂಡ ಘಟನೆ ನಡೆದಿದೆ. ಇಲ್ಲಿನ ವಿನಯ್ ಬರ್ಬೊಜಾ ಅವರ ಮನೆಯ ಹೊರ ಆವರಣಕ್ಕೆ ಚಿರತೆ ಬಂದಿದೆ. ಚಿರತೆಯ ಚಲನವಲನ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೋಳ ಪರಿಸರವು ದಟ್ಟ ಕಾಡಿನಿಂದ ಕೂಡಿದ್ದು ಸ್ಥಳೀಯರು ಹತ್ತಿರದ ಪಟ್ಟಣಕ್ಕೆ ತೆರಳಲು ಕಾಡು ದಾರಿಗಳನ್ನೇ ಅವಲಂಬಿಸು ಅನಿವಾರ್ಯತೆಯಿದೆ. ಇದೀಗ ಚಿರತೆಯ ಪ್ರತ್ಯಕ್ಷ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.
ಅರಣ್ಯಾಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದರೂ ಚಿರತೆ ಹಿಡಿಯುವ ಯಾವುದೇ ಸೂಚನೆ ಇಲಾಖೆಯಿಂದ ಈ ವರೆಗೆ ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಸಂಜೆ ಹೊತ್ತು ಮನೆಗಳಿಂದ ಹೊರಬಾರದಂತೆ ಪರಸ್ಪರ ಎಚ್ಚರಿಕೆ ನೀಡುತ್ತಿದ್ದಾರೆ.