ಉಡುಪಿ, ಮಾ.28(DaijiworldNews/AK) : ಇನ್ನೇನು ಕೆಲವೇ ದಿನದಲ್ಲಿ ಯುಗಾದಿ ಹಬ್ಬ ಬರಲಿದೆ. ಚಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂಬ ಧ್ಯೇಯದೊಂದಿಗೆ ಶುಭಾಶಯ ಸಾರುವ ಮರಳು ಕಲಾಕೃತಿಯು ಸಾರ್ವಜನಿಕರ ಗಮನಸೆಳೆದಿದೆ.


ಉಡುಪಿಯ ಕೋಟೇಶ್ವರದ ಹಳೆ ಅಳಿವೆ ಕಡಲ ತೀರದಲ್ಲಿ ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆಯವ ಕೈಚಳಕದಿಂದ ಮೂಡಿ ಬಂದಿದೆ. ಕಡಲ ತೀರದಲ್ಲಿ ನೆರೆದ ಜನತೆಗೆ ಮರಳಿನ ಶಿಲ್ಪಕಲೆ ಮನಸೂರೆಗೊಳಿಸಿತು.
ಹಸಿರು ತಳಿರು ತೋರಣದೊಂದಿಗೆ ಮನೆಗೋಡೆ, ಮರದ ಕಳಶದಲ್ಲಿ ತುಂಬಿರುವ ಅಕ್ಕಿ, ಹರಿವಾಣದಲ್ಲಿ ಬೇವು-ಬೆಲ್ಲ, ಮಾವು, ತೆಂಗಿನಕಾಯಿ, ಸಿಯಾಳದ ಗೊಂಚಲಿನೊಂದಿಗೆ ಈ ಮರಳು ಕಲಾಕೃತಿಯು ಯುಗಾದಿ ಹಬ್ಬದ ಶುಭಾಶಯಗಳು ನಾಮಾಂಕಿತದೊಂದಿಗೆ, ಆಕರ್ಷಣೀಯವಾಗಿ ಮೂಡಿ ಬಂದಿದೆ.