ಮಂಗಳೂರು, ಮಾ.29 (DaijiworldNews/AA): ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಬ್ಲಾಕ್ ಸಮಿತಿಯ ವತಿಯಿಂದ ಇಸ್ರೇಲ್ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯು ಅಡ್ಡೂರು ಜಂಕ್ಷನ್ ನಲ್ಲಿ ನಡೆಯಿತು.




ಎಸ್ಡಿಪಿಐ ಗುರುಪುರ ಬ್ಲಾಕ್ ಸಮಿತಿಯ ಅಧ್ಯಕ್ಷ ಎ.ಕೆ.ರಿಯಾಝ್ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಆಸೀಫ್ ಕೊಟೆಬಾಗಿಲು ಮುಖ್ಯ ಭಾಷಣ ಮಾಡಿದರು.
ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಶಾಹಿಕ್ ಅಡ್ಡೂರು, ಗುರುಪುರ ಗ್ರಾಮ ಸಮಿತಿಯ ಅಧ್ಯಕ್ಷ ಅಶ್ರಫ್ ಕೈಕಂಬ, ಉಪಾಧ್ಯಕ್ಷ ಎ.ಕೆ.ಮುಸ್ತಾಕ್ ಅಡ್ಡೂರು, ಗಂಜಿಮಠ ಗ್ರಾಮ ಸಮಿತಿಯ ಅಧ್ಯಕ್ಷ ಝಾಕಿರ್ ಮಳಲಿ ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಮೊಹಮ್ಮದ್ ಅಶ್ರಫ್ ಮನ್ಸೂರ್ ಟಿಬೆಟ್, ಗುರುಪುರ ಬ್ಲಾಕ್ ಕೋಶಾಧಿಕಾರಿ ಝಬೈರ್ ಮಳಲಿ ಸ್ಥಳೀಯ ಎಸ್ಡಿಪಿಐ ಮುಖಂಡರಾದ ಸಲಾಂ ಗೋಳಿಪಡ್ಫು, ಅನ್ವರ್ ಗೋಳಿಪಡ್ಫು, ಹಮ್ಮಬ್ಬ ರೈಫಲ್ ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.