ಮಂಗಳೂರು, ಮಾ.29 (DaijiworldNews/AK): ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಬಜ್ಪೆ ಪಾಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮಹಿಳಾ ಸಿಬ್ಬಂದಿಗಳು ಮುಖ್ಯೋಪಾಧ್ಯಾಯಿನಿ ಸಹನಾ ಎಂ ಫೆಹಲಾವಿ ಇವರ ನೇತೃತ್ವದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಮಹಿಳಾ ಸಮ್ಮಾನ್ ಖಾತೆಗಳನ್ನು ಅಂಚೆ ಇಲಾಖೆ ಮೂಲಕ ತೆರೆದು ಆರ್ಥಪೂರ್ಣಗೊಳಿಸಿದರು.

ಶಾಲೆಯ ಸಹ ಮುಖ್ಯೋಪಾಧ್ಯಾಯಿನಿ ಸೆಲ್ವಿನ್ ಲೀನಾ ಸಲ್ಡಾನ ಹಾಗೂ ಅಂಚೆ ಇಲಾಖೆ ಉದ್ಯೋಗಿಗಳಾದ ದಯಾನಂದ ಜಿ ಕತ್ತಲ್ ಸಾರ್, ಸುಭಾಷ್ ಪಿ ಸಾಲಿಯಾನ್ ಉಪಸ್ಥಿತರಿದ್ದರು.