ಮಂಗಳೂರು, ಮಾ.30(DaijiworldNews/TA): ಜೈಲಿನ ಜಾಮರ್ನಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಗೃಹ ಸಚಿವರ ಗಮನಕ್ಕೆ ತರಲಾಗಿದೆ. ಶೀಘ್ರ ಇದಕ್ಕೆ ಪರಿಹಾರ ದೊರೆಯಲಿದೆ. ಜೈಲು ಸ್ಥಳಾಂತರಗೊಂಡರೆ ಸಾಕಷ್ಟು ಸಮಸ್ಯೆಗಳು ಪರಿಹಾರವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಜಿಲ್ಲಾ ಕಾರಾಗೃಹವನ್ನು ಬಂಟ್ವಾಳ ತಾಲೂಕಿನ ಇರಾ ಸಮೀಪಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಮೊದಲ ಹಂತದ 110 ಕೋ.ರೂ. ಮೊತ್ತದ ಕಾಮಗಾರಿ ಬಿಡುಗಡೆಗೊಂಡು ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ನಡೆದಿದೆ. ಎರಡನೇ ಹಂತದ ಕಾಮಗಾರಿಗೆ 195 ಕೋ.ರೂ. ಮೊತ್ತದ ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು, ಎಪ್ರಿಲ್ ನಲ್ಲಿ ನಡೆ ಯುವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆಯಿದೆ.
ಜೈಲಿನ ಅವರಣ ಗೋಡೆ ಹಾಗೂ ಬ್ಯಾರಕ್ಗಳ ನಿರ್ಮಾಣ ಕಾಮಗಾರಿ ಪೂರ್ಣ ಗೊಂಡಿದೆ. 1 ಸಾವಿರ ಕೈದಿಗಳನ್ನು ಇರಿಸಲು ಅವಕಾಶವಿದೆ. ಎರಡನೇ ಹಂತದಲ್ಲಿ 195 ಕೋ.ರೂ. ವೆಚ್ಚದಲ್ಲಿ ಸಿಬಂದಿಯ ವಸತಿಗೃಹ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಗೃಹ ಸಚಿವ ಡಾ| ಜಿ. ಪರಮೇಶ್ವರ್ ಸದ್ಯದಲ್ಲೇ ಜಿಲ್ಲೆಗೆ ಭೇಟಿ ನೀಡಲಿದ್ದು, ಮಂಗಳೂರಿನ ಕಾರಾಗೃಹ ಮತ್ತು ಬಂಟ್ವಾಳದಲ್ಲಿ ನಿರ್ಮಾಣ ಹಂತದಲ್ಲಿ ರುವ ಜೈಲಿನ ಪ್ರದೇಶಕ್ಕೂ ತೆರಳಿ ಪರಿಶೀ ಲಿಸಲಿದ್ದಾರೆ. ಜೈಲಿನ ಕಟ್ಟಡ ಕಾಮಗಾರಿ ಸಹಿತ ಮೂಲ ಸೌಕರ್ಯ ಗಳನ್ನು ಪೂರ್ಣಗೊಳಿಸಿರುವುದರಿಂದ 3 ತಿಂಗಳಲ್ಲಿ ಸ್ಥಳಾಂತರಗೊಳ್ಳುವ ನಿರೀಕ್ಷೆ ಇದೆ ಎಂದರು.