ಬಂಟ್ವಾಳ, ಮಾ.31 (DaijiworldNews/AK): ಶ್ರೀ ಶಾರದ ಸೇವಾ ಪ್ರತಿಷ್ಠಾನ ತುಂಬೆ ಇದರ ರಜತ ಮಹೋತ್ಸವದ ಹಿನ್ನಲೆಯಲ್ಲಿ ರಜತ ಮಹೋತ್ಸವ ಆಚರಣಾ ಸಮಿತಿ ರಚನೆ ಹಾಗೂ ವಿಸ್ತೃತ ಸಭಾಭವನ ನಿರ್ಮಾಣಕ್ಕೆ ಪೂರ್ವಭಾವಿ ಸಮಾಲೋಚನಾ ಸಭೆ ಭಾನುವಾರ ತುಂಬೆಯ ಶಾರದಾ ಪ್ರತಿಷ್ಠಾನದಲ್ಲಿ ಅಧ್ಯಕ್ಷ ಗಣೇಶ್ ಸುವರ್ಣ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂದರ್ಭ ರಜತ ಮಹೋತ್ಸವ ಆಚರಣಾ ಸಮಿತಿಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿ ಶಾರದಾ ಪ್ರತಿಷ್ಠಾನ ಶಾಶ್ವತವಾದ ನೆಲೆ ಕಂಡುಕೊಳ್ಳಬೇಕು ಎನ್ನುವ ಉದ್ದೇಶದಿಂದ ದಶಮಾನೋತ್ಸವ ಸುಸಂದರ್ಭದಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ಇಲ್ಲಿ ಸೇವೆ ಸಲ್ಲಿಸುವ ಯುವಕರಲ್ಲಿ ಬದ್ಧತೆಯಿರುವುದರಿಂದ ಈ ಸಂಘಟನೆ ಇಷ್ಟು ಎತ್ತರಕ್ಕೆ ಬೆಳೆದಿದೆ. ಇದೀಗ ರಜತ ವರ್ಷಾಚರಣೆಗೆ ಪಾದಾರ್ಪಣೆ ಮಾಡಿದ್ದು ಶಾಶ್ವತ ಯೋಜನೆಯಾಗಿ ವಿಸ್ತೃತ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಮುಂದಿನ ಆರು ತಿಂಗಳ ಒಳಗಾಗಿ ಸುಂದರ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು.
ಈ ಸಂದರ್ಭ ನೂತನ ರಜತಮಹೋತ್ಸವ ಆಚರಣಾ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸಂಸದ ಬ್ರಿಜೇಶ್ ಚೌಟ, ಅಧ್ಯಕ್ಷರಾಗಿ ರಾಘವ ಬಂಗೇರ ಪೆರ್ಲಬೈಲು, ಕಾರ್ಯಧ್ಯಕ್ಷರಾಗಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರಾಮಚಂದ್ರ ಸುವರ್ಣ, ಅನಿಲ್ ಪಂಡಿತ್, ಜಗದೀಶ್ ಕುಮ್ಡೇಲು, ಕುಮೋಧಾಕ್ಷ, ಜಯಪ್ರಕಾಶ್, ಉಮೇಶ್ ಶೆಟ್ಟಿ ಬರ್ಕೆ, ಪ್ರಧಾನ ಸಂಚಾಲಕರಾಗಿ ತಾರಾನಾಥ ಕೊಟ್ಟಾರಿ ತೇವು, ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಕುಮ್ಡೇಲ್, ಕೋಶಾಧಿಕಾರಿಯಾಗಿ ವಿನೋದ್ ಬೊಳ್ಳಾರಿ, ಸಂಘಟನಾ ಕಾರ್ಯದರ್ಶಿಯಾಗಿ ವಿಜಯ್ ಕುಮಾರ್ ಕಜೆಕಂಡ, ಜಗದೀಶ್ ಕಡೆಗೋಳಿ ಮತ್ತಿತರ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ನೂತನ ರಜತ ಮಹೊತ್ಸವ ಆಚರಣಾ ಸಮಿತಿಯನ್ನು ಅಧ್ಯಕ್ಷ ರಾಘವ ಬಂಗೇರ ಪೇರ್ಲಬೈಲು ಉದ್ಘಾಟಿಸಿದರು. ಕಾರ್ಯಧ್ಯಕ್ಷರಾದ ಚಂದ್ರಪ್ರಕಾಶ್ ಶೆಟ್ಟಿ, ಅನಿಲ್ ಪಂಡಿತ್, ಉಮೇಶ್ ಶೆಟ್ಟಿ ಬರ್ಕೆ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶೋಭಾ ಗೋಪಾಲ ಮೈಂದನ್, ಕೋಶಾಧಿಕಾರಿ ಸೋಮಪ್ಪ ಕೋಟ್ಯಾನ್ ಹಾಗೂ ರಜತ ಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ಶಾರದಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ.ತುಂಬೆ ಸ್ವಾಗತಿಸಿದರು. ಸುಶಾನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಮಂಗಳೂರಿನ ಮಂಗಳ ಅಸ್ಪತ್ರೆ ಮತ್ತು ಕಿಡ್ನಿ ಫೌಂಡೇಷನಗ ಸಹಯೋಗದೊಂದಿಗೆ ಆರೋಗ್ಯ ಉಚಿತ ತಪಾಸಣೆ ಹಾಗೂ ಕಣ್ಣು ಪರೀಕ್ಷಾ ಶಿಬಿರ ನಡೆಯಿತು.