ಸುಳ್ಯ, ಏ.01 (DaijiworldNews/AA): ಕಾರೊಂದು ನಿಯಂತ್ರಣ ತಪ್ಪಿ ಮನೆಯ ಮಹಡಿಯ ಮೇಲೆ ಬಿದ್ದು ಮನೆ ಮತ್ತು ಕಾರು ಜಖಂಗೊಂಡ ಘಟನೆ ಮಾ. 30ರ ಬೆಳಿಗ್ಗೆ ಸಂಭವಿಸಿದೆ.

ಸಹಕಾರಿ ಧುರೀಣ ನಿತ್ಯಾನಂದ ಮುಂಡೋಡಿಯವರ ಕಾರನ್ನು ಅವರ ಸೊಸೆ ಚಲಾಯಿಸಿಕೊಂಡು ಗುತ್ತಿಗಾರು ಕಡೆಗೆ ತೆರಳುತ್ತಿದ್ದರು. ಚಿರೆಕಲ್ನ ಮನೆಯಿಂದ ಮುಖ್ಯರಸ್ತೆಗೆ ಬಂದು ಸ್ವಲ್ಪ ಮುಂದಕ್ಕೆ ಹೋಗಿ ಕಾರಿಗೆ ಬ್ರೇಕ್ ಹಾಕಿಸಲು ಯತ್ನಿಸಿದ್ದಾರೆ. ಈ ವೇಳೆ ಬ್ರೇಕ್ನ ಅಡಿಗೆ ನೀರಿನ ಬಾಟಲ್ ಸಿಲುಕಿ ಬ್ರೇಕ್ ಸಿಗದ ಕಾರಣ ಕಾರು ನಿಯಂತ್ರಣ ತಪ್ಪಿ ರಸ್ತೆಯ ಕೆಳಭಾಗದಲ್ಲಿದ್ದ ಸೀತಮ್ಮ ಚಿರೆಕಲ್ಲು ಎಂಬವರ ಮನೆಯ ಮಹಡಿಯ ಮೇಲೆ ಮೇಲೆ ಬಿದ್ದಿದೆ.
ಘಟನೆಯಲ್ಲಿ ಕಾರು ಮತ್ತು ಮನೆ ಜಖಂಗೊಂಡಿದ್ದು, ಅದೃಷ್ಟವಶಾತ್ ಚಾಲಕಿ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಕ್ರೇನ್ ಮೂಲಕ ಕಾರನ್ನು ಮನೆಯ ಮೇಲ್ಛಾವಣಿಯಿಂದ ತೆಗೆಯಲಾಯಿತು.