ಉಡುಪಿ ಡಿ 05 : ಬಹು ನಿರೀಕ್ಷೆ ಹುಟ್ಟಿಸಿದ್ದ "ವಾಯ್ಸ್ ಆಫ್ ಉಡುಪಿ" ಗೆ ತೆರೆ ಬಿದ್ದಿದೆ. 6 ವಾರಗಳ ಕಾಲ ನಡೆದಿದ್ದ ಕಾರ್ಯಕ್ರಮದಲ್ಲಿ 12 ಮಂದಿ ಸ್ಪರ್ಧಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. 15 ವರ್ಷ ಮೇಲ್ಪಟ್ಟ ಹಾಗೂ 15 ವರ್ಷ ಒಳಗಿನ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಕ್ರಮವಾಗಿ ವಿಜಯಲಕ್ಷ್ಮಿ ಹಾಗೂ ತನುಷ್ ರಾಜ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಶನಿವಾರ ಉಡುಪಿಯ ಪುರಭವನದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರ ಆಯ್ಕೆ ನಡೆಯಿತು. ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ) ಇವರು ಸತತ 5 ನೇ ಬಾರಿಗೆ ಕಾರ್ಯಕ್ರಮದಲ್ಲಿ ವನ್ನು ಆಯೋಜಿಸಿದ್ದಾರೆ.
ಒಕ್ಕೂಟದ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಮಾತನಾಡಿ ಈ ವರ್ಷ ಕರಾವಳಿ ಸಂಗೀತ ಕಲಾವಿದರ ಒಕ್ಕೂಟವು ದಶಮಾನೋತ್ಸವವನ್ನು ಆಚರಿಸುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಒಂದು ವೇದಿಕೆಯನ್ನು ಒದಗಿಸುವುದು ಈ ಕಾರ್ಯಕ್ರಮದಲ್ಲಿ ದ ಉದ್ದೇಶ ಎಂದರು.
ಯಶವಂತ್ ಆಚಾರ್ಯ, ಶಶಿಕಿರಣ್ ಚೆನ್ನಗಿರಿ, ಅಜಯ್ ವಾರಿಯರ್ ತೀರ್ಪುಗಾರರಾಗಿ ಸಹಕರಿಸಿದ್ದರು. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಯಶವಂತ್ ಆಚಾರ್ಯ 15 ವರ್ಷ ಮೇಲ್ಪಟ್ಟವರ ತೀರ್ಪುಗಾರಿಕೆ ನಡೆಸುವುದು ತುಂಬಾ ಕಷ್ಟದ ವಿಷಯವಾಗಿತ್ತು ಎಂದರು. ಇದೇ ವೇಳೆ ಸಂಗೀತ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ್ದಕ್ಕಾಗಿ ಪ್ರೇಮ್ ಕುಮಾರ್ ಹಾಗೂ ಬಿ. ಕಾರಂತ್ ಇವರನ್ನು ಸನ್ಮಾನಿಸಲಾಯಿತು. 15 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ನಿಶಾ ಫೆರ್ನಾಂಡಿಸ್ ಹಾಗೂ 15 ವರ್ಷ ಒಳಗಿನ ವಿಭಾಗದಲ್ಲಿ ಸ್ವಸ್ತಿಕ್ ದ್ವಿತೀಯ ಸ್ಥಾನಿಗಳಾಗಿ ಹೊರಹೊಮ್ಮಿದ್ದರು.
ಜಯಕರ್ ಶೆಟ್ಟಿ ಇಂದ್ರಾಳಿ, ಮುರಳಿಧರ್ ಕಾಮತ್, ಭಾಸ್ಕರ್ ಬಸ್ರೂರ್, ಮಲ್ಲಿಕಾ ಶೆಟ್ಟಿ, ನಮ್ಮ ಮೊಬೈಲ್ ಮಾಲಕರಾದ ಹರೀಶ್ ಹಾಗೂ ಗಣೇಶ್, ವಿಜಯ್ ಗೋಪಾಲ್ ಬಂಗೇರ, ಶರತ್ ಉಚ್ಚಿಲ ಹಾಗೂ ಇತರರು ಉಪಸ್ಥಿತರಿದ್ದರು. ಈ ಸಂಚಿಕೆಯು ಅತೀ ಶೀಘ್ರದಲ್ಲಿ ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.