ಮಂಗಳೂರು,ಜೂ(DaijiworldNews/AZM):ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಳವು ಪ್ರಕರಣಗಳಿಗೆ ಸಂಬಂದಿಸಿದಂತೆ ಮುಲ್ಕಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೊಲ್ನಾಡ್ ನಿವಾಸಿ ಸವಾದ್(24) ಹಾಗೂ ತೋಕೂರು ನಿವಾಸಿ ಮೊಹಮ್ಮದ್ ಸಿನಾನ್(19) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಗೋವಾ ರಾಜ್ಯದಲ್ಲಿ ಕಳವು ಮಾಡಿದ ನೊಂದಣಿ ಸಂಖ್ಯೆ ಅಳವಡಿಸದ ಪಾರ್ಚುನರ್ ಕಾರು ಹಾಗೂ ರಾಯಲ್ ಎನ್ ಪೀಲ್ಡ್ ಬುಲೆಟ್ ಬೈಕ್ -2, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕದಿಕೆ, ಸಂತೆಕಟ್ಟೆ ಕಡೆಗಳಲ್ಲಿ ಮನೆ ಹಾಗೂ ದೈವಸ್ಥಾನ ಕಳ್ಳತನ ಮಾಡಿದ ಚಿಲ್ಲರೆ ಹಣ ಹಾಗೂ ಅಪರಾಧ ಕೃತ್ಯಕ್ಕೆ ಬಳಸಲಾದ ಬೈಕ್ ಹಾಗೂ ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೇಲ್ಕಂಡ ಕೃತ್ಯಗಳಲ್ಲಿ ಬಾಗಿಯಾಗಿರುವ ಕಾರ್ನಾಡು ನಿವಾಸಿ ಹಿಯಾಜ್ ಎಂಬಾತ ಹಾಗೂ ಇನ್ನಿತರ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಸ್ವಾಧೀನ ಪಡಿಸಿದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 40 ಲಕ್ಷ ಆಗಿದೆ.