ಮಂಗಳೂರು, ಮೇ.02(DaijiworldNews/ AK):ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸಮುದಾಯದ ಯೋಗಕ್ಷೇಮಕ್ಕೆ ತನ್ನ ನಿರಂತರ ಬದ್ಧತೆಯ ಭಾಗವಾಗಿ, ಕರ್ನಾಟಕ ಸೋಶಿಯಲ್ ಕ್ಲಬ್ನಲ್ಲಿ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.






ಈ ಕಾರ್ಯಕ್ರಮದಲ್ಲಿ ಇಬ್ಬರು ನಿಪುಣ ತಜ್ಞರಾದ ಡಾ. ಬುಶ್ರಾ ಇಬ್ರಾಹಿಂ, ಕನ್ಸಲ್ಟೆಂಟ್ ಗೈನಕಾಲಜಿಸ್ಟ್ ಮತ್ತು ಡಾ. ಅಶ್ಮಿಯಾ ಅಬ್ದುಲ್ ರಜಾಕ್, ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಅವರಿಂದ ಆರೋಗ್ಯದ ಕುರಿತು ಮಾಹಿತಿ ನೀಡಿದರು.ಈ ವೇಳೆ ಇಬ್ಬರೂ ವೈದ್ಯರು ಮಹಿಳೆಯರ ಸಂತಾನೋತ್ಪತ್ತಿ ಮತ್ತು ಚರ್ಮದ ಆರೋಗ್ಯದಲ್ಲಿನ ಪ್ರಮುಖ ಸಮಸ್ಯೆಗಳ ಪರಿಹಾರ , ತಡೆಗಟ್ಟುವುದು, ಆರೈಕೆ ಸಲಹೆಗಳ ಕುರಿತು ಮಾಹಿತಿ ನೀಡಿದರು.
ಬಳಿಕ ಸಂವಾದಾತ್ಮಕ ಪ್ರಶ್ನೋತ್ತರ ಅವಧಿ ನಡೆಯಿತು, ಹೆಚ್ಚುವರಿಯಾಗಿ, ನೋಂದಾಯಿತ ಭಾಗವಹಿಸುವವರಿಗೆ ಉಚಿತ ವೈಯಕ್ತಿಕ ಸಮಾಲೋಚನೆಗಳನ್ನು ಒದಗಿಸಲಾಯಿತು, ವೈಯಕ್ತಿಕ ಸಲಹೆ ಮತ್ತು ಬೆಂಬಲವನ್ನು ನೀಡಲಾಯಿತು.
ಪರಿಣಾಮಕಾರಿಯಾದ ಕಾರ್ಯಕ್ರಮವು ಎಲ್ಲಾ ನೋಂದಾಯಿತ ಮಹಿಳೆಯರಿಗೆ ಸಂಪೂರ್ಣವಾಗಿ ಉಚಿತವಾಗಿತ್ತು ಮತ್ತು ಸಮುದಾಯದಿಂದ ಅಗಾಧ ಪ್ರತಿಕ್ರಿಯೆ ಕಂಡು ಬಂತು.ಸಂಘದ ಮಹಿಳಾ ವಿಭಾಗವು ಅವರ ಅವಿಶ್ರಾಂತ ಪ್ರಯತ್ನ ಮತ್ತು ಸಮನ್ವಯಕ್ಕಾಗಿ ವಿಶೇಷ ಮನ್ನಣೆಯನ್ನು ಪಡೆಯಿತು. ಕಾರ್ಯಕ್ರಮವು ಭಾರಿ ಯಶಸ್ಸನ್ನು ಪಡೆಯುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಂದ ಮತ್ತು ವೈದ್ಯರಿಂದ ಮೆಚ್ಚುಗೆಯನ್ನು ಪಡೆಯಿತು.
ಇಂತಹ ಕಾರ್ಯಕ್ರಮ ಮಹಿಳೆಯರ ಆರೋಗ್ಯದಲ್ಲಿ ಜಾಗೃತಿ, ಮತ್ತು ಸಬಲೀಕರಣದ ಮಹತ್ವವನ್ನು ತಿಳಿಸಲಾಯಿತು.