ಬಂಟ್ವಾಳ, ಮೇ. 03(DaijiworldNews/AK): ಮಂಗಳೂರಿನ ಬಂಟ್ಟಾಳ ವಲಯದ ಅಲ್ಲಿಪಾದೆ ಚರ್ಚಿನಲ್ಲಿ ಯಾಜಕಿ ದೀಕ್ಷೆಯ ಸಂಭ್ರಮವು ಮೇ 2 ರಂದು ಸಡಗರದಿಂದ ನೆರವೇರಿತು

ಮಂಗಳೂರಿನ ಬಿಷಪರಾದ ಡಾ. ಪಿಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ವಂದನೀಯ ಗುರುಗಳಾದ ರೂಬನ್ ನಿಶಿತ್ ಲೋಬೊರವರು ಯಾಜಕಿ ದೀಕ್ಷೆಯನ್ನು ಸ್ವೀಕರಿಸಿದರು. ಬೆಳಿಗ್ಗೆ 9:30 ಕ್ಕೆ ಜರಗಿದ ಯಾಜಕಿ ದೀಕ್ಷೆಯ ಸಮಾರಂಭದಲ್ಲಿ ಯಾಜಕರು, ಧಾರ್ಮಿಕ ಸದಸ್ಯರು, ಕುಟುಂಬಸ್ಥರು ಹಾಗೂ ಜನಸ್ತೋಮವೇ ನೆರೆದಿತ್ತು.
ಬಲಿದಾನದ ನಂತರ ನಡೆದ ಅಭಿನಂದನ ಸಮಾರಂಭದಲ್ಲಿ ಹೊಸದಾಗಿ ಯಾಜಕರಾದ ರೂಬನ್ ನಿಶಿತ್ ಲೋಬೊರವರನ್ನು ಸನ್ಮಾನಿಸಲಾಯ್ತು. ವಂದನೀಯ ಪಾ. ಪ್ರೇಮ್ ಕುಟಿನ್ಹಾರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ವಂದನೀಯ ಫಾ. ರಾಕೇಶ್ ಮಥಾಯಸ್ ರವರು ಅಭಿನಂದಿಸಿದರು. ಅನಿತಾ ಲೋಬೊ ಸ್ವಾಗತಿಸಿ, ವಂದನೀಯ ಫಾ. ರೂಬನ್ ನಿಶಿತ್ ರವರು ನೆರೆದಿದ್ದ ಎಲ್ಲಾರಿಗೂ ಧನ್ಯವಾದಗಳನ್ನು ಅರ್ಪಿಸಿದರು.