ಮಂಗಳೂರು, ಮೇ. 03 (DaijiworldNews/TA): ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಸಂಬಂಧಿಸಿ ಮಂಗಳೂರು ಬಂದ್ ದಿನ ಅಡ್ಯಾರ್ ಕಣ್ಣೂರಿನ ನೌಶಾದ್ ಮೇಲಿನ ಹಲ್ಲೆ ಯತ್ನದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಲೋಹಿತಾಶ್ವ ಮುಡಿಪು ಪುನೀತ್ ವೀರನಗರ್ ಗಣೇಶ್ ಪ್ರಸಾದ್ ಕುತ್ತಾರ್ ಎಂದು ಗುರುತಿಸಲಾಗಿದೆ. ಈ ಮೊದಲು ಈ ಆರೋಪಿಗಳು ತೊಕ್ಕೊಟ್ಟಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಬಂದ್ ದಿನದ ಹಿಂದಿನ ರಾತ್ರಿ ತೊಕ್ಕುಟ್ಟುವಿನಲ್ಲಿ ಫೈಝಲ್ ಎಂಬಾತನನ್ನು ಇವರು ಇರಿದು ಗಾಯಗೊಳಿಸಿದ್ದರು. ಎರಡು ಪ್ರಕರಣಗಳಲ್ಲೂ ಪೊಲೀಸರು ಆರೋಪಿಗಳ ಮೇಲೆ ಭಾರತೀಯ ನೀತಿ ಸಂಹಿತೆ ಪ್ರಕಾರ 60/ 2025 189 (2) 189(4) 191(2) 109 ಹಾಗು 3(5) ಕೇಸು ದಾಖಲಿಸಿದ್ದಾರೆ.