ಸುಳ್ಯ, ಮೇ. 04 (DaijiworldNews/TA): ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ನುಗ್ಗಿ ಹಾನಿ ಮಾಡಿದ ಘಟನೆ ಸುಳ್ಯ ಸಮೀಪದ ಪೆರಾಜೆ ಸಮೀಪ ಶನಿವಾರ ರಾತ್ರಿ ನಡೆದಿದೆ.

ಕನ್ನಡ ಪೆರಾಜೆ ಶಾಲೆ ಬಳಿ ಅಬ್ದುಲ್ಲಾ ಹಾಗೂ ಪದ್ಮನಾಭ ಭಟ್ ಎಂಬವರ ತೋಟ ಬಳಿಕ ಕಲ್ಲುಚರ್ಪೆ ಕಡೆಯಿಂದ ಕಾಡಾನೆಗಳ ಹಿಂಡು ಕಾಡಿಗೆ ಪ್ರವೇಶಿಸಿದೆ. ಪೆರಾಜೆ ಗ್ರಾಮದ ಸುತ್ತಮುತ್ತ ಕಾಡಾನೆ ಯು ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಬೇಕೆಂದು ಅರಣ್ಯ ಇಲಾಖೆ ತಿಳಿಸಿದೆ.