ಬಂಟ್ವಾಳ, ಮೇ. 04 (DaijiworldNews/TA): ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಮನೆಗೆ ಡಾ.ಸಂತೋಷ್ ಗುರೂಜಿ ಅವರು ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಅವರು, ಸುಹಾಸ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮೇಲೆ ಅನುಮಾನ ಬರುತ್ತಿದೆ. ಕಳೆದ 15 ದಿನಗಳಿಂದ ಒಬ್ಬನೇ ಓಡಾಡಬೇಕು. ಆಯುಧಗಳನ್ನು ಇಟ್ಟುಕೊಳ್ಳಬಾರದು ಎಂದು ಪೊಲೀಸರು ಸೂಚಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಹಾಗಾಗಿ ಇದರ ಹಿಂದೆ ಏನೋ ಇದೆ ಎಂದು ಅನಿಸುತ್ತಿದೆ. ಪೊಲೀಸರ ಸಹಕಾರ ಇದೆಯಾ ಎಂಬುದರ ಬಗ್ಗೆ ನ್ಯಾಯಾಂಗ ತನಿಖೆ ಅಥವಾ ಎನ್ ಐಎ ತನಿಖೆ ನಡೆಸಬೇಕು. ಹೆಣದ ವಿಚಾರದಲ್ಲಿ ರಾಜಕೀಯ ಎಂದಿಗೂ ಮಾಡಬಾರದು ಎಂದು ಅವರು ಇದೇ ವೇಳೆ ಆಗ್ರಹಿಸಿದರು.