ಡಿ 6: ಐಶ್ವರ್ಯ ರೈ ಮತ್ತು ಆರಾಧ್ಯ ಮಂಗಳೂರಿಗೆ ಬಂದು ಮನೆಮಗಳಂತೆ ಸಂಬಂಧಿಕರ ಮದುವೆಗೆ ಬಂದು ಸಂಭ್ರಮಿಸಿದ್ದು ಹಳೇ ಸುದ್ದಿ. ಆದರೆ ಆ ಪೋಟೋಗಳಿನ್ನು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತನೇ ಇದೆ. ಇದೆಲ್ಲವನ್ನು ನೋಡಿದ ಮಹಿಳೆಯೊಬ್ಬರು ಟ್ವಿಟ್ವರ್ ನಲ್ಲಿ ಮಾಡಿದರು. ಆ ಟ್ವೀಟ್ ಗೆ ಅಭಿಷೇಕ್ ಬಚ್ಚನ್ ನೀಡಿದ ಖಡಕ್ ಟ್ವೀಟ್ ಸದ್ಯ ಈಗ ವೈರಲ್ ಆಗಿದೆ.
ಆಕೆ ಅಭಿಷೇಕ್ ಬಚ್ಚನ್ ರನ್ನು ಉದ್ದೇಶಿಸಿ ನೇರವಾಗಿ " ಜೂನಿಯರ್ ಬಚ್ಚನ್ , ನಿಮ್ಮ ಮಗಳು ಶಾಲೆಗೆ ಹೋಗುತ್ತಾಳೋ ಇಲ್ಲವೋ? ಯಾವಾಗ ನೋಡಿದರೂ ಅವಳ ತಾಯಿ ಕೈ ಹೊಡಿದು ಸಮಾರಂಭಗಳಲ್ಲಿ ಅವಳ ತಾಯಿ ಕೈ ಹಿಡಿದು ಭಾಗವಹಿಸುತ್ತಿರುತ್ತಾಳೆ. ಆಕೆಗೆ ಸಹಜ ಬಾಲ್ಯವೇ ಇಲ್ಲ" ಎಂದು ಟ್ವೀಟ್ ಮಾಡಿದ್ದರೆ.
ಅದಕ್ಕೆ ಅಭಿಷೇಕ್ ’ ಡಿಯರ್ ಮೇಡಂ, ನನಗೆ ತಿಳಿದಿರುವಂತೆ ಶಾಲೆಗಳಿಗೆ ವಾರಾಂತ್ಯದಲ್ಲೊ ರಜೆ ಇರುತ್ತದೆ. ನಿಮಗೆ ಆ ಕುರಿತು ಮಾಹಿತಿ ಇಲ್ಲ ಅನ್ನಿಸುತ್ತದೆ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.