ಮಂಗಳೂರು, ಮೇ. 11 (DaijiworldNews/TA): ಭಾರತಕ್ಕೆ ಮತ್ತು ಯೋಧರ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಿ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಶಿವಳ್ಳಿ ಸ್ಪಂದನ ಮತ್ತು ರುದ್ರ ಸಮಿತಿ ವತಿಯಿಂದ ರುದ್ರ ಪಾರಾಯಣ ಮಿತ್ರರು ರುದ್ರ ಪಾರಾಯಣ ನಡೆಸಿದರು.


ಕದ್ರಿಯ ಮಾತಾ ಕೃಪದಲ್ಲಿ ನಡೆದ ಸಹೃದಯಿಗಳ ಸಾಮಾನ್ಯ ಸಭೆಯಲ್ಲಿ ಶಿವಳ್ಳಿ ಸ್ಪಂದನ ಕಾರ್ಯದರ್ಶಿ ಕೃಷ್ಣ ಭಟ್, ಶಿವಳ್ಳಿ , ಡಾ. ರಾಜೇಂದ್ರ ಪ್ರಸಾದ, ಮತ್ತು ಪಯ ಶ್ರೀಕೃಷ್ಣ ಭಟ್, ರುದ್ರ ಸಮಿತಿ ಭಾರತಿ ಕಾಲೇಜು ನಂತೂರು ಇವರು ಮಾತನಾಡಿದರು.
ಸಮಾಜ ಅಂತಾರಾಷ್ಟ್ರೀಯ ಉಗ್ರರ ಚಟುವಟಿಕೆ ದಮನ ಮಾಡುವ ಹಿನ್ನೆಲೆಯಲ್ಲಿ ಬ್ರಾಹ್ಮಣರಾದ ನಾವೆಲ್ಲರೂ ರುದ್ರ ಪಾರಾಯಣ ಮಾಡಿ ಭಾರತ ಸರ್ಕಾರಕ್ಕೆ ಮತ್ತು ಭಾರತದ ಯೋಧರಿಗೆ ಆತ್ಮಸ್ಥೈರ್ಯವನ್ನು ನೀಡಲು ಒಟ್ಟಾಗಿ ನಿಮ್ಮ ನಿಮ್ಮ ಮನೆಯ ಹತ್ತಿರದ ದೇವಸ್ಥಾನದಲ್ಲಿ ಯಾವುದೇ ವೇದ ಪಾರಾಯಣ ಮಾಡಬೇಕು ಎಂದು ಕರೆ ನೀಡಿದರು. ಡಾ ಗುರುರಾಜ ಕಟೀಲು ಕಾರ್ಯಕ್ರಮ ನಿರೂಪಿಸಿದರು.