ಬಂಟ್ವಾಳ, ಮೇ. 11 (DaijiworldNews/TA): ಯೇಸು ಕ್ರಿಸ್ತರ ಜನನದ 2025ನೇ ಜುಬಿಲಿಯ ಪ್ರಯುಕ್ತ ಲೊರೆಟ್ಟೊ ಮಾತಾ ಚರ್ಚ್ ನ ವ್ಯಾಪ್ತಿಯಲ್ಲಿ, ದೇಶ ವಿದೇಶದ ವಿವಿಧ ಧರ್ಮಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮ ಗುರುಗಳ ಹಾಗೂ ಧರ್ಮ ಭಗಿನಿಯರ ಸಹಮಿಲನ ಕಾರ್ಯಕ್ರಮ ಇಂದು ವಿಜ್ರಂಭನೆಯಂದ ಜರುಗಿತು. ಪ್ರಧಾನ ಧರ್ಮಗುರುಗಳಾಗಿ ವಂ. ಜೊಸ್ಸಿ ಫರ್ನಾಂಡಿಸ್ ರವರೊಂದಿಗೆ ಸುಮಾರು 45 ದರ್ಮ ಗುರುಗಳು ಹಾಗೂ ಭಗಿನಿ ಯವರೊಂದಿಗೆ ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾದ ಈ ಸಂಭ್ರಮವು ಲೊರೆಟ್ಟೊ ಮಾತಾ ಸಂಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು.






ಈ ಸಮಾರಂಭದ ರೂವಾರಿ ಹಾಗೂ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಲೊರೆಟ್ಟೊ ಚರ್ಚಿನ ಧರ್ಮ ಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತಾ ರವರು, ಯೇಸುಕ್ರಿಸ್ತರ ನಡೆನುಡಿಗಳನ್ನು ತಮ್ಮ ಜೀವನವನ್ನು ಅವರಿಗೋಸ್ಕರ ಮುಡಿಪಾಗಿಟ್ಟು ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಿ ದೇಶ ವಿದೇಶಗಳಲ್ಲಿ ವಿವಿಧ ಧರ್ಮ ಪ್ರಾಂತ್ಯಗಳಲ್ಲಿ ಲೊರೆಟ್ಟೊ ಮಾತಾ ಪಾಲಾಕಿಯ ಆಶಿರ್ವಾದಗಳೊಂದಿಗೆ ಸೇವೆ ಸಲ್ಲಿಸುತ್ತಿರುವ ಧರ್ಮಗುರುಗಳು ಹಾಗೂ ಧರ್ಮ ಭಗಿನಿಯವರ ಈ ಸಹ ಮಿಲನ ಕಾರಕ್ರಮ ವಿಶೇಷತೆಗಳಿಂದ ತುಂಬಿದೆ. ಈ ಕಾರಕ್ರಮದ ಪ್ರಾಮುಖ್ಯತೆಯನ್ನು ಮನಗಂಡು ಕಾರ್ಯಕ್ರಮಗೊಸ್ಕರ ದೂರದ ಊರುಗಳಿಂದ ಆಗಮಿಸಿ ಇದರ ಸೊಬಗನ್ನು ಹೆಚ್ಚಿಸಿದ ಪ್ರತಿಯೊಬ್ಬರನ್ನು ಸ್ಮರಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ವೇದಿಕೆಯಲ್ಲಿ ವಂ. ಹೆರಾಲ್ಡ್ ಡಿಸೋಜ, ಸಂತ ಆಗ್ನೇಸ್ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಮರಿಯ ರೂಪಾ, ಸಂಯೋಜಕರಾದ ಪ್ರಕಾಶ್ ವಾಸ್, ಸೂಪರಿಯರ್ ಭಗಿನಿ ಇಡೊಲಿನ್, ಮಂಡಳಿಯ ಕಾರ್ಯದರ್ಶಿಯವರಾದ ಶೈಲಾ ಬರ್ಬೊಜಾ ಸನ್ಮಾನಿತರು ವಿವರವನ್ನು ವಾಚಿಸಿದರು. ಪಾಲನಾ ಮಂಡಳಿಯ ಉಪಾಧ್ಯಾಕ್ಷರಾದ ಸಿಪ್ರಿಯಾನ್ ಡಿಸೋಜ ಸ್ವಾಗತಿಸಿದರು, ಲೆನ್ನಿ ಷೆನಾಂಡಿಸ್ ವಂದಿಸಿದರು. ಈ ಕಾರ್ಯಕ್ರಮವನ್ನು ಲೊರೆಟ್ಟೊ ಸಿಬಿಎಸ್ ಸಿ ಅಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂ. ಜೇಸನ್ ವಿಜೆಯ್ ಮೊನಿಸ್ ರವರು ನಿರೂಪಿದರು.