ಉಡುಪಿ, ಮೇ. 12 (DaijiworldNews/AK):ಈಗ ಎಲ್ಲೆಲ್ಲೂ ಆಪರೇಷನ್ ಸಿಂಧೂರದೇ ಮಾತು. ಭಾರತೀಯ ಸೇನೆ ನಡೆಸಿದ ಅಪರೇಷನ್ ಸಿಂಧೂರ ಈಗ ಜಗತ್ತೆನ್ನ ಸೆಳೆದಿದೆ ಎನ್ನುವುದು ಕೂಡ ಸತ್ಯ. ಈ ಸಿಂಧೂರ ಸದ್ಯ ಯಕ್ಷಗಾನವನ್ನು ಕೂಡ ಬಿಟ್ಟಿಲ್ಲ.

ಉಡುಪಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಒಂದಾದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿಯ ಯಕ್ಷಗಾನ ರಂಗಸ್ಥಳದಲ್ಲಿ ಸಿಂಧೂರದ ಪ್ರಸ್ತಾಪವಾಗಿದೆ. ಕಲಾವಿದ, ಪತ್ರಕರ್ತ, ಸಂದೇಶ್ ಆರ್ಡಿ ಅವರು ಪ್ರಸಂಗದ ಸಂಭಾಷಣೆಯ ವೇಳೆ ಸಿಂಧೂರದ ಕುರಿತು ವ್ಯಾಖ್ಯಾನ ನೀಡಿರುವುದು ಸದ್ಯ ಯಕ್ಷಗಾನ ಪ್ರೇಮಿಗಳ ಗಮನ ಸೆಳೆದಿದೆ.
ಯಕ್ಷಗಾನ ಪ್ರದರ್ಶನದ ಈ ಸಂಭಾಷಣೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯಕ್ಷಗಾನ ಕಲಾವಿದರ ವಾಕ್ಚಾತುರ್ಯದ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.