ದಾಯ್ಜಿವರ್ಲ್ಡ್ ಇಂಪ್ಯಾಕ್ಟ್: ಕೂಳೂರು ಹಳೆ ಸೇತುವೆಯ ಮೇಲೆ ಸುರಕ್ಷತಾ ರೇಲಿಂಗ್ ಅಳವಡಿಕೆ
Tue, May 13 2025 05:04:01 PM
ಮಂಗಳೂರು, ಮೇ. 13 (DaijiworldNews/AK): ಕಳೆದ ಮೂರು ದಿನಗಳ ಹಿಂದೆ ದಾಯ್ಜಿವರ್ಲ್ಡ್ ವಾಹಿನಿಯು ಕೂಳೂರು ಹಳೆಯ ಸೇತುವೆಯಿಂದ ಉಂಟಾಗುವ ಸುರಕ್ಷತಾ ಅಪಾಯಗಳನ್ನು ಎತ್ತಿ ತೋರಿಸುವ ಸುದ್ದಿಯನ್ನು ವರದಿ ಮಾಡಿತ್ತು.
ಉಡುಪಿಯಿಂದ ಮಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೂಳೂರು ಹಳೆಯ ಸೇತುವೆಯ ಬಲಭಾಗದಲ್ಲಿ ಸರಿಯಾದ ಸುರಕ್ಷತೆಯ ಕೊರತೆಯಿಂದ ಅಪಾಯವನ್ನುಂಟು ಮಾಡುವ ಸ್ಥಿತಿಯಲ್ಲಿತ್ತು. ಕೇವಲ ತಾತ್ಕಾಲಿಕ ಬ್ಯಾರಿಕೇಡ್ ಅನ್ನು ಅಳವಡಿಸಲಾಗಿತ್ತು. ಇದು ರಾತ್ರಿ ಪ್ರಯಾಣದ ಸಮಯದಲ್ಲಿ ವಾಹನಗಳು ನದಿಗೆ ಉರುಳುವ ಸಾಧ್ಯತೆ ಕೂಡ ಇತ್ತು. ಅಲ್ಲದೇ ಅಲ್ಲಿಯ ಪರಿಸ್ಥಿತಿ ವಿಶೇಷವಾಗಿ ಆತಂಕಕಾರಿಯಾಗಿತ್ತು. ಏಕೆಂದರೆ ಕನಿಷ್ಠ ಸುರಕ್ಷತಾ ತಡೆಗೋಡೆಯನ್ನು ಚಾಲಕರು ಸುಲಭವಾಗಿ ತಪ್ಪಿಸಿಕೊಳ್ಳಬಹುದು, ಆದರೆ ಇದು ಅಪಘಾತದ ಸಾಧ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ದಾಯ್ಜಿ ವರ್ಲ್ಡ್ ವರದಿಯ ನಂತರ, ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಇದೀಗ ಜಿಲ್ಲಾಧಿಕಾರಿ (ಡಿಸಿ) ಮುಲ್ಲೈ ಮುಹಿಲನ್ ಅವರು ತಕ್ಷಣವೇ ಪ್ರತಿಕ್ರಿಯಿಸಿ ಯಾವುದೇ ಸಂಭಾವ್ಯ ದುರಂತಗಳನ್ನು ತಡೆಗಟ್ಟವ ನಿಟ್ಟಿನಲ್ಲಿ ಕೂಳೂರು ಹಳೆಯ ಸೇತುವೆಯ ಮೇಲೆ ರೇಲಿಂಗ್ಗಳ ಅಳವಡಿಕೆ ಮಾಡಿದ್ದಾರೆ.