ಮಂಗಳೂರು, ಮೇ. 13 (DaijiworldNews/AK):ಮಾವಿನ ಹಣ್ಣಿನ ಲೋಡ್ ತುಂಬಿದ್ದ ಲಾರಿ ಹೊಂಡಕ್ಕೆ ಬಿದ್ದ ಘಟನೆ ಪಚ್ಚನಾಡಿ ಬೋಂದೆಲ್ ಸಂಪರ್ಕ ರಸ್ತೆಯಲ್ಲಿ ನಡೆದಿದೆ.


ಉಡುಪಿ ಮಾವು ಮೇಳಕ್ಕೆ ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ. ವಾಮಂಜೂರು ಕಡೆಯಿಂದ ಪಚ್ಚನಾಡಿ ಕಡೆ ಸಂಚರಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಲಾರಿ ಚಾಲಕ ರಫೀಕ್ ಉಳಾಯಿಬೆಟ್ಟು ಅವರಿಗೆ ಗಾಯಗಳಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.