ಕಾರ್ಕಳ, ಮೇ. 14 (DaijiworldNews/AA): ನಂದಳಿಕೆ ಮುದ್ದಣ ಸ್ಮಾರಕ ಮಿತ್ರ ಮಂಡಳಿಯ ಸ್ಥಾಪಕರಲ್ಲಿ ಓರ್ವರಾದ ನಂದಳಿಕೆ ಬಾಲಚಂದ್ರ ರಾವ್ (76) ಬುಧವಾರ ಮಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಕರ್ನಾಟಕ ಬ್ಯಾಂಕಿನಲ್ಲಿ ದೀರ್ಘಕಾಲ ಅಧಿಕಾರಿಯಾಗಿ ನಿವೃತ್ತಿಯಾದ ಅವರು ಕವಿ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಮುದ್ದಣ ಸ್ಮಾರಕ ಮಿತ್ರಮಂಡಲಿ ಸ್ಥಾಪನೆ ಮಾಡಿ ಅದರ ಮೂಲಕ ಕವಿಯನ್ನು ನೆನಪಿಸುವ ನೂರಾರು ಕಾರ್ಯಕ್ರಮಗಳನ್ನು ಮಾಡಿರುತ್ತಾರೆ.
ಕವಿ ಮುದ್ದಣನ ಸಮಗ್ರ ಕಾವ್ಯ ಸಂಪುಟ ಬಿಡುಗಡೆ, ಮುದ್ದಣ ಮನೋರಮೆಯರ ಸಂಭಾಷಣೆಯ ಡಿವಿಡಿ, ಹುಟ್ಟೂರಿನಲ್ಲಿ ಮುದ್ದಣನ ನೆನಪಿನ ಗ್ರಂಥಾಲಯ, ಮುದ್ದಣ ಸ್ಮಾರಕ, ಮುದ್ದಣನ ಯಕ್ಷಗಾನ ಸಂಪುಟಗಳು, ಪ್ರತಿ ವರ್ಷ ಕವಿ ಮುದ್ದಣ ದಿನಾಚರಣೆ, ಸ್ಟಾಂಪ್ ಬಿಡುಗಡೆ, ಮುದ್ದಣ ಸ್ಮಾರಕ ಪ್ರಶಸ್ತಿ ಪೀಠ ಸ್ಥಾಪನೆ, ಮಂಗಳೂರಿನಲ್ಲಿ ಕವಿಯ ನೆನಪಿನ ಅಧ್ಯಯನ ಪೀಠ ಆರಂಭಿಸಿದ್ದರು.