ಉಡುಪಿ, ಮೇ. 15(DaijiworldNews/AK): ಉಡುಪಿಯ ಪ್ರಸಿದ್ಧ ಸಾಯಿರಾಧ ಗ್ರೂಪ್ ನ ಕಾರ್ಪೊರೇಟ್ ಆಫೀಸ್ ಕಟ್ಟಡ ಗುರವಾರದಂದು ಮಲ್ಪೆ- ಮಣಿಪಾಲ ರಸ್ತೆಯ ಶಿರಿಬೀಡುವಿನ ಸಮೀಪದಲ್ಲಿ ಲೋಕಾರ್ಪಣೆಗೊಂಡಿತು.













ಬಾರ್ಕೂರು ಮಹಾ ಸಂಸ್ಥಾನದ ಸ್ವಾಮಿಜಿಗಳಾದ ವಿದ್ಯಾ ವಾಚಸ್ಪತಿ ಡಾ.ವಿಶ್ವಸಂತೋಷ ಭಾರತಿ ಶ್ರೀಪದಿಜಿ ಅವರು ರಿಬ್ಬನ್ ದೀಪ ಬೆಳಗಿಸುವ ಮೂಲಕ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನೋಹರ ಶೆಟ್ಟಿಯವರು ಓರ್ವ ಮಾದರಿ ವ್ಯಕ್ತಿ. ಅವರ ತಂದೆ ಕೂಡ ಅವರಿಗೆ ಮಾದರಿ. ಶ್ರಮಪಟ್ಟು ದುಡಿದವರು. ಸಮಾಜಕ್ಕೆ ಒಂದು ಉತ್ತಮವಾದ ಕೊಡುಗೆಯನ್ನು ನೀಡಬೇಕು ಎಂಬುದು ಅವರ ಮುಖ್ಯ ಧ್ಯೇಯ. ಇನ್ನು ಅವರ ಮಕ್ಕಳು ಸಹ ತನ್ನ ತಂದೆಯ ಮಾರ್ಗದರ್ಶನವನ್ನು ಎಂದು ಮೀರಿದವರಲ್ಲ. ಮಕ್ಕಳಿಗೆ ಸಂಸ್ಕಾರ ಬೆಳೆಸಿದವರು. ಕರಾವಳಿ ಎಂದಾಗ ಇಡೀ ಸಾಯಿರಾಧ ಗ್ರೂಫ್ಸ್ ಎನ್ನುವುದನ್ನು ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಕೆಲಸವನ್ನು ಪ್ರವಾಸೋದ್ಯಮದಲ್ಲಿ ಮಾಡಿದವರು. ಹಾಗಾಗಿ ಅವರು ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಬಳಿಕ ಟಿ ಎಂ ಎ ಪೈ ಫೌಂಡೆಶನ್ ನ ಅಧ್ಯಕ್ಷರಾದ ಟಿ ಅಶೋಕ್ ಪೈ ಮಾತನಾಡಿ, ಸಮಾಜದಲ್ಲಿ ಸಾಯಿರಾಧ ಎನ್ನುವ ಸಂಸ್ಥೆಯನ್ನು ನಿರ್ಮಿಸಿ ಹಲವಾರು ಜನರಿಗೆ ಉದ್ಯೋಗವನ್ನು ನೀಡಿದವರು ಮನೋಹರ ಶೆಟ್ಟಿಯವರು. ಹಲವಾರು ಸಂಸ್ಥೆಯನ್ನು ನಿರ್ಮಿಸಿ ಜನರಿಗೆ ಸಿಗಬೇಕಾದ ಸೌಲಭ್ಯವನ್ನು ನೀಡುವ ಸಂಸ್ಥೆ ಇದಾಗಿದೆ ಎಂದು ಹೇಳಿದರು.
ಟಿ ಎಂ ಎ ಪೈ ಫೌಂಡೆಶನ್ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಿಭಾಗದ ವಲಯಾಧ್ಯಕ್ಷದ ಮುಖ್ಯ ಪ್ರಬಂಧಕರಾದ ರಾಜೇಶ್ ಖನ್ನಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಇದರ ಸಹಾಯಕ ಮುಖ್ಯ ಪ್ರಬಂಧಕಿ ಸುರೇಖಾ ಎನ್. , ಉಡುಪಿ ಜಿಲ್ಲಾ ಸಹಕಾರಿ ಒಕ್ಕೂಟ ಅಧ್ಯಕ್ಷರಾದ ಜಯಕರ ಶೆಟ್ಟಿ, ಇಂದ್ರಾಳಿ ಸಾಯಿರಾಧ ಗ್ರೂಪ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮನೋಹರ ಶೆಟ್ಟಿ, ಮಕ್ಕಳು ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ಎಮ್ ಶೆಟ್ಟಿ , ಶರಣಂ ಎಮ್ ಶೆಟ್ಟಿ, ಗಣ್ಯರಾದ ಮಣಿಪಾಲ ಪ್ರೊ ಚಾನ್ಸಲರ್ ಡಾ ಎಚ್ ಎಸ್ ಬಲ್ಲಾಳ್, ಮಾಜಿ ಸಚಿವ ವಿನಯ ಕುಮಾರ ಸೊರಕೆ, ಉದ್ಯಮಿ ಪುರುಷೋತ್ತಮ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು