ಕಾರ್ಕಳ , ಮೇ. 16(DaijiworldNews/AK): ಸಾಣೂರು ಕ್ಯಾಶ್ಯೂ ಬಳಿಯ ಹಿತ್ತಲಿನ ಬೃಹತ್ ಗಾತ್ರದ ಬಾವಿಗೆ ಇಳಿದಿದ್ದ ವ್ಯಕ್ತಿಯೋರ್ವರನ್ನು ಕಾರ್ಕಳ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.



35 ಅಡಿ ಆಳ ಹಾಗೂ 20 ಅಡಿ ಅಗಲದ ಬಾವಿಗೆ ಹರೀಶ್ ಆಚಾರ್ಯ(55) ಶುಕ್ರವಾರ ಬೆಳಿಗ್ಗೆ 11.55 ವೇಳೆಗೆ ಬಾವಿ ಸ್ವಚ್ಛಗೊಳಿಸಲು ಇಳಿದ್ದಿದ್ದರು. ಮೇಲಕ್ಕೆ ಬರಲಾಗದೆ ಸಾಧ್ಯವಾಗದೆ ಸಿಲುಕಿದ್ದು , ಅಪಾಯದಲ್ಲಿದ್ದ ಅವರನ್ನು ಕಾರ್ಕಳ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ವರು ತಕ್ಷಣ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿದ್ದಾರೆ.
ಈ ಕಾರ್ಯಚರಣೆಯಲ್ಲಿ ಅಧಿಕಾರಿಯವರಾದ ಆಲ್ಬರ್ಟ್ ಮೋನಿಸ್, ಸಿಬ್ಬಂದಿಯವರಾದ ಅಚ್ಚುತ ಕರ್ಕೇರ, ಹರಿಪ್ರಸಾದ್ ಶೆಟ್ಟಿಗಾರ್, ಜಯ ಮೂಲ್ಯ, ಮುಝಮಿಲ್, ಗಣೇಶ ಆಚಾರ್ಯ, ಭೀಮಪ್ಪ ರವರು ಪಾಲ್ಗೊಂಡರು.